
ಸ್ನಾನ ಮಾಡಲು ತೆರಳಿದ್ದ ಮಹಿಳೆ ಸ್ನಾನಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಾಞಂಗಾಡ್ ನಲ್ಲಿ ಸಂಭವಿಸಿದೆ.



ಇಲ್ಲಿನ ಬಾವಾ ನಗರದ ನಿವಾಸಿ ಮಜೀದ್ ಮತ್ತು ಶಕೀಲಾ ದಂಪತಿಯ ಪುತ್ರಿ ಶುಹೈರಾ (36) ಮೃತ ದುರ್ದೈವಿಯಾಗಿದ್ದಾರೆ .ಸೇನಾ ಅಧಿಕಾರಿ ಕೋಝಿಕ್ಕೋಡ್ ಶರೀದ್ ಅವರ ಪತ್ನಿಯಾಗಿರುವ ಶುಹೈರಾ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾತ್ ರೂಂ ಗೆ ಸ್ನಾನಕ್ಕೆಂದು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ತಳಿಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶುಹೈರಾ ಆದಾಗಲೇ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದ್ದು. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.