ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಡೆಯಲ್ಲಿ ಉಪ್ಪಿನಂಗಡಿ ಪೇಟೆಯ ಕೊಳಚೆ ನೀರು ಮತ್ತು ಮಳೆ ನೀರು ಹಾದು ಹೋಗುವ ಬಗ್ಗೆ ಸಮಸ್ಯೆಗಳಿದ್ದದ್ದಕ್ಕೆ ಉಪ್ಪಿನಂಗಡಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಪದಾಧಿಕಾರಿಗಳು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ತಿಳಿಸಿದ್ದಕ್ಕೆ ಸ್ವತಹ ಬಂದು ಶಾಶ್ವತ ಪರಿಹಾರವನ್ನು ಮಾಡುವ ನಿಟ್ಟಿನಲ್ಲಿ ಇಂದು ಉಪ್ಪಿನಂಗಡಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಸಮಸ್ಯೆಯನ್ನು ಸ್ವತಹ ವೀಕ್ಷಿಸಿ ಕಾಮಗಾರಿ ನಡೆಸುವ ತಂಡದವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಉಪಾಧ್ಯಕ್ಷರಾದ ಶ್ರೀ ಶಬೀರ್ ಕೆಂಪಿ, ಕಾರ್ಯದರ್ಶಿಗಳಾದ ರಹಿಮಾನ್ ಯೂನಿಕ್, ಇರ್ಷಾದ್ ಯು ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮಿ ಪ್ರಭು, ಸದಸ್ಯರುಗಳಾದ ರಹಿಮಾನ್ ಮಠ, ರಶೀದ್ ಮಠ, ಧನಂಜಯ್ ನಟ್ಟಿಬೈಲ್ ಮತ್ತು ಗ್ರಾಮ ಪಂಚಾಯತ್ ಪಿಡಿಒ ವಿಲ್ಫ್ರೆಡ್ ರೋಡ್ರಿಗಸ್ ಹಾಜರಿದ್ದರು.