Visitors have accessed this post 346 times.

ನಿರ್ಮಲಾ ಸೀತಾರಾಮನ್‌ರಿಂದಲೇ ಕರ್ನಾಟಕಕ್ಕೆ ಅನ್ಯಾಯ- ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Visitors have accessed this post 346 times.

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕದ ಹೋರಾಟಕ್ಕೆ ಬಿಜೆಪಿಗರು ಬರಬೇಕಿತ್ತು ಆದರೆ ಬಂದಿಲ್ಲ ಪಾಪ. ಬಿಜೆಪಿ ಸಂಸದರು ಕೋಲೆ ಬಸವ ಇದ್ದಾಗೆ. ಆ ಬಸವ (ಹಸು) ನರೇಂದ್ರ ಮೋದಿ ತಲೆ ಅಲ್ಲಾಡಿಸು ಎಂದರೆ ತಲೆ ಅಲ್ಲಾಡಿಸುತ್ತಾವೆ. ಬೇಡ ಅಂದರೆ ಅಲ್ಲಾಡಿಸಲ್ಲ. ಬಿಜೆಪಿ ಎಂಪಿಗಳು ಒಂದು ದಿನನೂ ಬಾಯಿ ಬಿಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 15 ಹಣಕಾಸಿನಲ್ಲಿ 2020-21ರಲ್ಲಿ 5,495 ಕೋಟಿ ರೂಪಾಯಿಗಳನ್ನ ಶಿಫಾರಸು ಮಾಡಿದರು. ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ಹೇಳಿದೆ ಮಿಸ್ಟರ್ ಯಡಿಯೂರಪ್ಪ ಹೋಗಿ ನರೇಂದ್ರ ಮೋದಿ ಬಳಿ ಹೋಗಿ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರ ಹತ್ತಿರ ಹೋಗಿ ಕೇಳಿ ಎಂದು ಹೇಳಿದ್ದೆ. ಇದು ಒಂದು ಸಣ್ಣ ಅಮೌಂಟ್ ಅಲ್ಲ. ವಿಧಾನಸಭೆಯಲ್ಲಿ ಯಡಿಯೂರಪ್ಪಗೆ, ಬಿಜೆಪಿ ಸಂಸದರಿಗೆ ಹೇಳಿದ್ದೆ. ಆದರೆ ಅವರು ಏನು ಹೇಳಲಿಲ್ಲ. ಫೆರಿಪೆರಲ್​ ರಿಂಗ್ ರೋಡ್ ಮಾಡೋಕೆ 3 ಸಾವಿರ ಕೋಟಿ ಕೊಡುತ್ತೇನೆ ಎಂದರು ಕೊಡಲಿಲ್ಲ. ನೀರಿನ ಸೌಲಭ್ಯಕ್ಕಾಗಿ 3 ಸಾವಿರ ಕೋಟಿ ರೂಪಾಯಿ ಕೊಡ್ತಿನಿ ಎಂದು ಕೊಡಲಿಲ್ಲ. 5,495 ಕೋಟಿ ರೂಪಾಯಿ ಒಟ್ಟು ಸೇರಿ 11,495 ಕೋಟಿ ರೂಪಾಯಿ ರಾಜ್ಯಕ್ಕೆ ಬರಲಿಲ್ಲ ಎಂದು ಸಿಎಂ ಹೇಳಿದರು. ಹಣಕಾಸು ಸಚಿವೆ 15ನೇ ಹಣಕಾಸು ಆಯೋಗ ಅಟನೋಮಸ್​ ಇಂಡಿಪೆಂಡೆಟ್​ ಆಗಿದೆ. ಅದರಲ್ಲಿ ನಾವು ಮಧ್ಯ ಪ್ರವೇಶಿಸಲು ಆಗಲ್ಲ ಎಂದು ಬಜೆಟ್ ವೇಳೆ ಹೇಳಿದ್ದಾರೆ. ಆದರೆ ಅಮ್ಮ ತಾಯಿ 11,495 ಕೋಟಿ ರೂಪಾಯಿ ಯಾಕೆ ಕೊಡಲಿಲ್ಲ. ಮಧ್ಯೆ ಪ್ರವೇಶಿಸಲ್ಲ ಎಂದರೆ ನಿಮ್ಮ ಅಡಿನೇ ಬರುತ್ತದೆ. 11,495 ಸಣ್ಣ ಅಮೌಂಟ್ ಅಲ್ಲ. ಕರ್ನಾಟಕದಿಂದ ಆಯ್ಕೆಯಾದ ಸಚಿವೆಯಿಂದಲೇ ಹಣ ನಮಗೆ ಸಿಗಲಿಲ್ಲ. ಈ ರೀತಿ ಅನ್ಯಾಯ ಆಗಲು ಮೋದಿ ಕಾರಣ. 15ನೇ ಹಣಕಾಸು ಆಯೋಗದ ವರದಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಬೊಮ್ಮಾಯಿ, ಯಡಿಯೂರಪ್ಪನವರು ನನ್ನ ಮೇಲೆ ದೂರಿದ್ದರು. ಈ ಎಲ್ಲವನ್ನು ಬಜೆಟ್​ ದಾಖಲೆಗಳನ್ನು ಇಟ್ಟುಕೊಂಡೇ ನಾನು ಇಲ್ಲಿ ಮಾಹಿತಿ ಕೊಡುತ್ತಿದ್ದೇನೆ. ಬಿಜೆಪಿಯವರೇ ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿದ್ದೀರಿ. ಮೋದಿ ಸರ್ಕಾರ ಮಲತಾಯಿ ಧೋರಣೆ ಕರ್ನಾಟಕಕ್ಕೆ ಮಾಡುತ್ತಿದೆ. ಇವರೆಲ್ಲ ಬಿಜೆಪಿ ನಾಯಕರು, ಸಂಸದರು, ಶಾಸಕರು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 8 ರಿಂದ 9 ವರ್ಷಗಳಲ್ಲಿ ಒಟ್ಟು ನಮಗೆ 1 ಲಕ್ಷದ 87 ಸಾವಿರದ 787 ಕೋಟಿ ರೂಪಾಯಿ ಅನ್ಯಾಯವಾಗಿದೆ. 224 ತಾಲೂಕುಗಳಲ್ಲಿ ಬರಗಾಲವಿದೆ ಎಂದು ಕೇಂದ್ರಕ್ಕೆ ವರದಿ ಕೊಡಲಾಗಿದೆ. ಡಿ.20 ರಂದು ಮೋದಿ, ಅಮಿತ್ ಶಾರನ್ನ ನಾನು ಮತ್ತು ಕೃಷ್ಣಬೈರೇಗೌಡ ಸೇರಿ ಭೇಟಿ ಮಾಡಿದೆವು. ಸಭೆ ಮಾಡೋಣ ಅಂದರು. ಆದರೆ ಸಭೆ ಮಾಡಿಲ್ಲ, ಇದರಿಂದ ನಮಗೆ ಎನ್​ಡಿಆರ್​ಎಫ್​​ನಿಂದ ಒಂದು ಪೈಸೆ ಬಂದಿಲ್ಲ. ಅವರ ಮನೆಯಿಂದ ಹಣ ಕೊಡಲ್ಲ, ನಮ್ಮ ಟ್ಯಾಕ್ಸ್​ ದುಡ್ಡು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *