Visitors have accessed this post 234 times.

ಮಂಗಳೂರು: ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೇರಿಸಲು ನಳಿನ್ ಕುಮಾರ್ ಕಟೀಲ್ ಮನವಿ

Visitors have accessed this post 234 times.

ಮಂಗಳೂರು: ಮಂಗಳೂರಿನಲ್ಲಿರುವ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ಕಾರ್ಮಿಕ  ಸಚಿವರಾದ ಭೋಪೇಂದ್ರ ಯಾದವ್ ರವರನ್ನು ಇಂದು ನಳಿನ್ ಕುಮಾರ್ ಕಟೀಲ್ ರವರು ನವದೆಹಲಿಯಲ್ಲಿ  ಭೇಟಿಯಾಗಿ ಮನವಿ ಸಲ್ಲಿಸಿದರು.

ಜಿಲ್ಲೆಯ ಶ್ರಮಿಕ ವರ್ಗಕ್ಕೆ ಅನುಕೂಲವಾಗುವಂತೆ,  ಮಂಗಳೂರು ಇಎಸ್ಐ ಆಸ್ಪತ್ರೆಯಲ್ಲಿ ಮೂಲಭೂತ  ಸೌಕರ್ಯಗಳ ಅಭಿವೃದ್ಧಿ,  ಅತ್ಯಾದುನಿಕ ವೈದ್ಯಕೀಯ ಉಪಕರಣಗಳು, ಎಂ.ಆರ್.ಐ. ಘಟಕ, ಸಿ.ಟಿ. ಸ್ಕಾನಿಂಗ್  ಯಂತ್ರಗಳ ಅಳವಡಿಕೆ, ತಜ್ಞ ವೈದ್ಯರ ಹಾಗೂ ಇತರೆ ಸಿಬ್ಬಂದಿಗಳ ನೇಮಕಾತಿಯೊಂದಿಗೆ ವಿವಿಧ ವಿಶೇಷ ವೈದ್ಯಕೀಯ   ಸೇವೆಗಳು ದೊರೆಯುವಂತಾಗಲು ಇಎಸ್ ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಮಾನ್ಯ ಸಚಿವರಲ್ಲಿ ದಕ್ಷಿಣ  ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಮನವಿ ಮಾಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *