ಕಾಸರಗೋಡು : 5 ವರ್ಷ ಹಿಂದಿನ ಮಹಿಳೆಯ ಹತ್ಯೆ ಪ್ರಕರಣ – ಮೃತದೇಹಕ್ಕಾಗಿ ಶೋಧ ಆರಂಭ

ಕಾಸರಗೋಡು : 5 ವರ್ಷಗಳ ಹಿಂದೆ ಹತ್ಯೆಯಾದ ಮಹಿಳೆಯ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮತ್ತೆ ಪ್ರಾರಂಭಿಸಿದ್ದಾರೆ. ಮೂಲತಃ ಕೊಲ್ಲಂ ಇರವಿಪುರಂ ವಾಳತ್ತಿಂಗಲ್ ವೇಳೆ ವೀಟಿಲ್ ನ ಪ್ರಮೀಳಾ (30) ಅವರು 5 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ಅವರ ಮೃತದೇಹವನ್ನು ಪತ್ತೆಹಚ್ಚುವ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇದೀಗ ಮೃತದೇಹ ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪುನಃ ಆರಂಭಿಸಿದ್ದಾರೆ.ಮೃತ ಪ್ರಮೀಳ ಅವರ ಪತಿ ಮೂಲತ: ತಳಿಪರಂಬ ಆಲಕ್ಕೋಡು ನಿವಾಸಿ ಸೆಲ್ವರಾಜ್. ಈ ಹಿಂದೆ ಪ್ರಮೀಳಾ ಹಾಗೂ ಸೆಲ್ವರಾಜ್ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಸರಗೋಡು ವಿದ್ಯಾನಗರದ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು. 2019 ಸೆ. 19ರ ರಾತ್ರಿ ದಂಪತಿ ನಡುವೆ ಜಗಳ ಉಂಟಾಗಿದ್ದು, ಆ ಬಳಿಕ ಪ್ರಮೀಳಾ ದಿಢೀರ್ ಆಗಿ ನಾಪತ್ತೆಯಾಗಿದ್ದರು. ನಂತರ ಪ್ರಮೀಳಾ ನಾಪತ್ತೆಯಾಗಿರುವ ಬಗ್ಗೆ ಪತಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Leave a Reply