ಇಂದು ಮಂಗಳೂರಿನ ಅಡ್ಯಾರ್ ನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ-ವಾಹನ ಸಂಚಾರ ನಿಷೇಧ, ಬದಲಿ ವ್ಯವಸ್ಥೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ನಲ್ಲಿ ಕಾಂಗ್ರೆಸ್ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿರುವುದರಿಂದ (ಇಂದು) ಫೆ.17ರಂದು ಬೆಳಗಿನಿಂದ ಸಂಜೆಯ ವರೆಗೆ ಬಿಸಿ ರೋಡ್ ನಿಂದ ಪಡೀಲ್ ನಡುವೆ ಘನ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಹೀಗಾಗಿ ಬಸ್, ಲಾರಿ ಇನ್ನಿತರ ಘನ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಉಡುಪಿ, ಮಂಗಳೂರು ಕಡೆಯಿಂದ ಬಿಸಿ ರೋಡ್ ಕಡೆಗೆ ತೆರಳುವ ಘನ ವಾಹನಗಳು ನಂತೂರು- ಪಂಪೈಲ್- ತೊಕ್ಕೊಟ್ಟು-ಮುಡಿಪು- ಮೆಲ್ಕಾರ್ ಮೂಲಕ ಸಂಚರಿಸುವುದು. ಅದೇ ರೀತಿ ಬೆಂಗಳೂರು- ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಆಗಮಿಸುವ ಘನ ವಾಹನಗಳು ಮೆಲ್ಕಾರ್- ಮುಡಿಪು- ತೊಕ್ಕೊಟ್ಟು- ಪಂಪೈಲ್ ಮೂಲಕ ತೆರಳುವುದು, ಈ ತಾತ್ಕಾಲಿಕ ಸಂಚಾರ ಬದಲಾವಣೆ ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಊರ್ಜಿತದಲ್ಲಿರುತ್ತದೆ ಎಂದು ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ. ವಾಹನ ಪಾರ್ಕಿಂಗ್ ವಿವರಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕ್ ಮಾಡುವುದು, ಬಂಟ್ವಾಳ ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳನ್ನು ಅಡ್ಯಾರ್ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಬಂಟ್ವಾಳದಿಂದ ಬರುವ ಬಸ್ಸುಗಳು ಕಣ್ಣೂರಿನಲ್ಲಿ ಯೂ ಟರ್ನ್ ಮಾಡಿ ಮೋತಿ ಶ್ಯಾಮ್ ಮೈದಾನದಲ್ಲಿ ಪಾರ್ಕ್ ಮಾಡುವುದು.ಮಂಗಳೂರು ಕಡೆಯಿಂದ ಬರುವ ವಾಹನಗಳು ಅಡ್ಯಾರ್ ಗಾರ್ಡನಲ್ಲಿ ಪಾರ್ಕಿಂಗ್ ಮಾಡುವುದು. ಕಾರ್ಯಕರ್ಕರನ್ನು ಕರೆತರುವ ವಾಹನಗಳು ಜನರನ್ನು ಇಳಿಸಿ ಕಣ್ಣೂರು ಮಸೀದಿ ಬಳಿಯ ಮೈದಾನದಲ್ಲಿ ಪಾರ್ಕ್ ಮಾಡುವುದು. ಅಡ್ಯಾರ್ ಕಟ್ಟೆಯ ಜಯಶೀಲ ಅಡ್ಯಂತಾಯರ ಮೈದಾನದಲ್ಲಿಯೂ ಪಾರ್ಕಿಂಗ್ ಅವಕಾಶ ಇದೆ.

Leave a Reply