August 30, 2025
WhatsApp Image 2024-02-17 at 4.58.51 PM

ಮಂಗಳೂರು : ಕಾಂಗ್ರೆಸ್ ರಾಜ್ಯ ಸಮಾವೇಶಕ್ಕೆ ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದ ಘಟನೆ ಶನಿವಾರ ಅಪರಾಹ್ನ ನಗರದಲ್ಲಿ ನಡೆದಿದೆ.

ಮಂಗಳೂರು ವಿಮಾನ ನಿಲ್ದಾಣದಿಂದ ಸಮಾವೇಶದ ಸಹ್ಯಾದ್ರಿ ಮೈದಾನಕ್ಕೆ ಬರೋ ವೇಳೆ ದಾರಿ ಮಧ್ಯೆ ನಗರದ ಬೊಂದೇಲ್ ಬಳಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬಿಜೆಪಿ ಶಾಸಕರ ವಿರುದ್ದ ಜಿಲ್ಲಾಡಳಿತ ಎಫ್ ಐಆರ್ ದಾಖಲಿಸಿರೋ ಹಿನ್ನಲೆ ಮತ್ತು ಬಜೆಟ್ ನಲ್ಲೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿರೋದನ್ನ ಖಂಡಿಸಿ ಈ ಮುತ್ತಿಗೆ ಯತ್ನ ನಡೆದಿದ್ದು ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಬಳಿಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಸಮಾವೇಶ ಸ್ಥಳಕ್ಕೆ ತೆರಳಿದರು. ಘಟನೆಯ ಬಳಿಕ ಮಂಗಳೂರಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

About The Author

Leave a Reply