Visitors have accessed this post 706 times.
ಮಂಗಳೂರು ಮಳಲಿ ಮಸೀದಿ ವಿವಾದದಲ್ಲಿ ಉತ್ಪನನ ಮಾಡಿ ಸರ್ವೇಗೆ ಆದೇಶಿಸುವಂತೆ ಕೋರಿ ವಿಹಿಂಪ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಶನಿವಾರ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಹಿಂಪ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಸರ್ವೆ ನಡೆಸಲು ವಿಹಿಂಪ ಮನವಿಗೆ ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಹೈಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕವಾದ ಮಂಡಿಸುವುದಾಗಿ ತಿಳಿಸಿದರು.ಮಸೀದಿ ಜಾಗ ವಕ್ಸ್ ಆಸ್ತಿ ಹೌದೋ, ಅಲ್ಲವೋ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.