ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತ್ರ, ಮಹಿಳೆಯರು ಪುಲ್ ಖುಷ್ ಆಗಿದ್ದಾರೆ. ಬಡತನದ ಬೇಗೆಯಲ್ಲಿ ಇದ್ದಂತ ಅದೆಷ್ಟೋ ಯಜಮಾನಿಯರಿಗೆ ಗೃಹ ಲಕ್ಷ್ಮೀ ಯೋಜನೆ ಸಂಸಾರದ ನೊಗವನ್ನೇ ಮುನ್ನೆಡೆಸೋ ಶಕ್ತಿಯನ್ನು ನೀಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅನಾರೋಗ್ಯದಿಂದ ಸಾವನ್ನಪ್ಪಿದಂತ ಮಗನ ಶವದ ಮುಂದೆ ತಾಯಿಯೊಬ್ಬಳು ಕಣ್ಣೀರಿಡುತ್ತಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಆಡುವ ಮಾತು ಮನ ಮಿಡಿಸುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಸತ್ತ ಮಗನ ಶವಕ್ಕೆ ಹಾರ ಹಾಕುತ್ತ, ಆ ತಾಯಿ ಕಣ್ಣೀರು ಇಡೋದು ಎಂಥವರನ್ನು ಕಣ್ಣೀರು ತರಿಸುವಂತಿದೆ. ಮಗನ ಶವಕ್ಕೆ ಹಾರ ಹಾಕುತ್ತಲೇ, ಆಸ್ಪತ್ರೆಗೆ ತೋರಿಸಿಕೊಳ್ಳೋ ಅಂದಿದ್ದೆ. ತೋರಿಸಿಕೊಂಡಿದ್ರೇ ಹಿಂಗೆ ಆಗುತ್ತಿರಲಿಲ್ಲ. ಅಯ್ಯೋ ಮಗನೆ ಎಂಬುದಾಗಿ ದುಖ ತೋಡಿಕೋಳ್ಳೋದನ್ನು ಕಾಣ ಬಹುದಾಗಿದೆ.
ಸವದತ್ತಿ ತಾಲೂಕು ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಮೃತ ವಿಶ್ವನಾಥನ ತಾಯಿ ನೀಲವ್ವಗೆ ಯಂಗ್ ಬೆಲಗಾಮ್ ಫೌಂಡೇಶನ್. ನೇರವಿಗೆ ನಿಂತಿದೆ. ಈ ನಡುವೆ ಮೃತ ಪುತ್ರನಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಅಜ್ಜಿ ನೀಲವ್ವ ಸಿದ್ದರಾಮಯ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ 2 ಸಾವಿರ ರೂ. ನೆನೆಸಿಕೊಂಡರು. ಪ್ರತಿ ತಿಂಗಳು 2 ಸಾವಿರ ರೂ. ಬರುತ್ತೆ. ಅದರಲ್ಲಿ ನಮ್ಮ ಅವ್ವನ ಹೊಟ್ಟೆ ತುಂಬುತ್ತೆ ಎಂದು ಮಗ ಹೇಳಿದ್ದ ಎಂದು ಕಣ್ಣೀರು ಹಾಕಿದ್ದಾರೆ.
ಮಗನೇ ನಿನ್ನನ್ನೇ ನಾನು ಸಾಕುತ್ತಿದ್ದೆ. ನೀನು ನನ್ನ ಚೆನ್ನಾಗಿ ನೋಡಿಕೊಳ್ಳೋದು ಏನು. ನನಗೆ ಗೃಹಲಕ್ಷ್ಮೀ ಯೋಜನೆಯ 2000 ಹಣ ಬರ್ತಿದೆ. ಅದು ನಮ್ಮ ಜೀವನ ನಿರ್ವಹಣೆಗೆ ಸಾಕಾಗಿತ್ತು. ಅಯ್ಯೋ ಮಗ ಸತ್ತೋಗಿ ಬಿಟ್ಟೆಯಲ್ಲೋ. ನೀನು ಚೆನ್ನಾಗಿರಬೇಕು. ಚೆನ್ನಾಗಿ ಇರು ಎನ್ನುತ್ತಲೇ ಶವದ ಮುಂದೆ ಕಣ್ಣೀರಿಡುವ ತಾಯಿ, ತನಗೆ ಗೃಹಲಕ್ಷ್ಮೀ ಯೋಜನೆ 2000 ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತಾಳೆ.