August 30, 2025
WhatsApp Image 2024-02-18 at 2.14.19 PM

ಮಂಗಳೂರು:ಡಿವೈಎಫ್ಐ 12 ನೇ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಚಾರದ ಭಾಗವಾಗಿ ಇಂದು ಫೆ.18 ರಂದು ಕದ್ರಿ ಉದ್ಯಾನವನದಲ್ಲಿ ಮುಂಜಾನೆಯ ನಡಿಗೆ ನಡೆಯಿತು.

2024 ರ ಫೆಬ್ರವರಿ 25,26,27 ರಂದು ಮೂರು ದಿನಗಳ ಕಾಲ ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನವನ್ನು ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯಡಿಯಲ್ಲಿ ಸಂಘಟಿಸಿದ್ದು. ರಾಜ್ಯದ ಯುವಜನರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚಿಸಿ ಅವುಗಳ ವಿರುದ್ಧ ಮುಂದಿನ ದಿನ ಚಳುವಳಿಯನ್ನು ರೂಪಿಸಲು, ಸಂಘಟನೆಯನ್ನು ಬಲಪಡಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಿದೆ.

ಡಿವೈಎಫ್ಐ ನ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಕೋಶಾಧಿಕಾರಿ ಮನೋಜ್ ವಾಮಂಜೂರು, ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ಡಾ ಜೀವನ್ ರಾಜ್ ಕುತ್ತಾರ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ, ಚರಣ್ ಶೆಟ್ಟಿ ಪಂಜಿಮೊಗರು, ಮಾದುರಿ ಬೋಳಾರ, ಯೋಗಿತಾ, ಮುಹಾಝ್ ಬೆಂಗರೆ, ಪುನೀತ್ ಉರ್ವಸ್ಟೋರ್,‌ ರಾಜೇಶ್ ಉರ್ವಸ್ಟೋರ್, ನಿತಿನ್ ಬಂಗೇರ, ಭರತ್ ಕುತ್ತಾರ್,‌ ಸಂತೋಷ್ ಡಿಸೋಜ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ರಿಹಾಬ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply