August 30, 2025
WhatsApp Image 2024-02-22 at 8.56.40 AM

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರಿನಲ್ಲಿ ನಡೆಯಿತು.ಚುನಾವಣಾಧಿಕಾರಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಉಸ್ತುವಾರಿ ಟಿ.ಪಿ ಅಶ್ರಫಲೀ ಸಾಹೇಬ್ ನೂತನ ಸಮಿತಿಯನ್ನು ರಚಿಸಿದರು. ಜಿಲ್ಲಾ ಕಾರ್ಯದರ್ಶಿ ಎ.ಎಸ್.ಇ ಕರೀಮ್ ಕಡಬ ಸ್ವಾಗತಿಸಿದರು.
ನೂತನ ಅಧ್ಯಕ್ಷರಾಗಿ ಸಿ.ಅಬ್ದುರ್ರಹ್ಮಾನ್ ಮಂಗಳೂರು , ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮಲಾರ್ ಮತ್ತು ಕೋಶಾಧಿಕಾರಿಯಾಗಿ ರಿಯಾಝ್ ಹರೇಕಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎ.ಎಸ್.ಇ ಇಬ್ರಾಹಿಂ ಕರೀಮ್ ಕಡಬ , ಖಾದರ್ ಮಾಸ್ಟರ್ ಬಂಟ್ವಾಳ , ಸಯ್ಯದ್ ಪಿ.ಕೆ , ಇಸ್ಮಾಯಿಲ್ ಬಂದರು , ಶಬೀರ್ ಅಝ್ಹರಿ ಪಾಂಡವರಕಲ್ಲು ಹಾಗೂ ಜತೆ ಕಾರ್ಯದರ್ಶಿಯಾಗಿ ಸಿದ್ಧೀಖ್ ಕಡಬ , ರಿಯಾಝ್ ಫೈಝಿ ಪಟ್ಟೆ ಸವಣೂರು , ಬಶೀರ್ ಉಳ್ಳಾಲ , ಇಸ್ಮಾಯಿಲ್ ಅರಬಿ ಬಂಟ್ವಾಳ ನೇಮಕಗೊಂಡರು.ಮುಸ್ಲಿಂ ಯೂತ್ ಲೀಗ್ ಕನ್ವೀನರಾಗಿ ಅನೀಸ್ ತೋಡಾರು , msf ಕನ್ವೀನರಾಗಿ ನಿಸಾರ್ ಅಹಮದ್ ಬೆಂಗರೆ ಹಾಗೂ ಮೀಡಿಯಾ ವಿಂಗ್ ಕನ್ವೀನರಾಗಿ ಮುಸ್ತಫಾ ರೆಂಜಲಾಡಿ ಅವರನ್ನು ಆಯ್ಕೆಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ವಂದಿಸಿದರು.

About The Author

Leave a Reply