Visitors have accessed this post 418 times.
ಮೈಸೂರು: ಮೊಹಮ್ಮದ್ ನಲಪಾಡ್ ಹೋಟೆಲ್ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟ ಬಣ್ಣ ಬಳಿಯಲಾಗಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಮೈಸೂರಿನ ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ಮುಂಭಾಗದ ಮೆಟ್ಟಿಲುಗಳಿಗೆ ಕನ್ನಡ ಬಾವುಟಗಳ ಬಣ್ಣ ಬಳಿಯಲಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋಟೆಲ್ ಮುಂದೆ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಬೇರೆ ಬಣ್ಣ ಹಚ್ಚುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.