Visitors have accessed this post 735 times.
ಶಿವಮೊಗ್ಗ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಂತ ಅರುಣ್ ಕುಗ್ವೆ ಅವರನ್ನು ರಾತ್ರೋರಾತ್ರಿ ಶಿವಮೊಗ್ಗ ಪೊಲೀಸಲು ಬಂಧಿಸಿದ್ದಾರೆ.
ಈ ಹಿಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಗೆ ಅರುಣ್ ಕುಗ್ವೆ ವಂಚಿಸಿದ್ದಾರೆ ಅಂತ ಮಹಿಳೆಯೊಬ್ಬರು ದೂರು ನೀಡಿದ್ದರು.
ಆ ಬಳಿಕ ತಾವೇ ಬಗೆಹರಿಸಿಕೊಳ್ಳುವುದಾಗಿ ಪೊಲೀಸ್ ಠಾಣೆಗೆ ಮಹಿಳೆ ಲಿಖಿತ ಹೇಳಿಕೆ ನೀಡಿದ ಕಾರಣ, ಪ್ರಕರಣ ದಾಖಲಿಸಿರಲಿಲ್ಲ.
ಕೆಲ ವರ್ಷಗಳ ನಂತ್ರ, ಬಿಜೆಪಿ ಮುಖಂಡ ಅರುಣ್ ಕುಗ್ವೆ ತಮ್ಮನ್ನು ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂಬುದಾಗಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ರಾಜೀ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಕಾರಣಾಂತರಗಳಿಂದ ದೂರು ದಾಖಲಾಗಿರಲಿಲ್ಲ.
ಈಗ ಮಹಿಳೆಯು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ತೆರಳಿ, ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ್ದಾರೆ ಅರುಣ್ ಕುಗ್ವೆ ಅಂತ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಶಿವಮೊಗ್ಗ ಮಹಿಳಾ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿ, ರಾತ್ರೋ ರಾತ್ರಿ ಇನ್ಸ್ ಪೆಕ್ಟರ್ ಭರತ್ ಕುಮಾರ್ ಸಾಗರದಲ್ಲಿನ ಅರುಣ್ ಕುಗ್ವೆ ಮನೆಗೆ ತೆರಳಿ ಅವರನ್ನು ಬಂಧಿಸಿದ್ದಾರೆ.
ಅಂದಹಾಗೇ ಅರುಣ್ ಕುಗ್ವೆ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಆಪ್ತರಲ್ಲಿ ಒಬ್ಬರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಗ್ವೆ ಗಡಿಪಾರು ಮಾಡಲಾಗಿತ್ತು. ಇನ್ನೂ ಮೂರು ದಿನಗಳಲ್ಲೇ ಅರುಣ್ ಕುಗ್ವೆ ಮದುವೆ ಕೂಡ ಬೇರೆ ಯುವತಿಯೊಂದಿಗೆ ನಡೆಯಬೇಕಿತ್ತು. ಈ ಸಂದರ್ಭದಲ್ಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.