Visitors have accessed this post 478 times.
ಮಂಗಳೂರು: ಶಕ್ತಿನಗರದಲ್ಲಿ ಮನೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಕೊಡುತ್ತಿದ್ದ ಯುವಕ ಏಣಿಯ ಜೊತೆಯಲ್ಲೇ ಆಯತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಮೃತ ಯುವಕ.
ಮೋಹಿತ್ ಪೂಜಾರಿ ಅವರು ಮಂಗಳೂರಿನ ಶಿವ ಎಂಡ್ ಡೆಕೋರೇಟರ್ಸ್ ಮಾಲಕ ಚಂದ್ರಶೇಖರ್ ಅವರ ಮನೆಯಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಫೆ.24ರಂದು ಮೋಹಿತ್ ಮತ್ತು ದೀಪಕ್ ಎರಡನೇ ಮಹಡಿಯಲ್ಲಿ ಹೊರಭಾಗದ ಗೋಡೆಗೆ ಪೈಂಟ್ ಮಾಡುತ್ತಿದ್ದಾಗ ಏಣಿ ಜಾರಿ ಹೊರಕ್ಕೆ ಬಿದ್ದಿದೆ. ಮೋಹಿತ್ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯುವ ಮೊದಲೇ ಮೃತಪಟ್ಟಿದ್ದಾರೆ.
ಇನ್ನು ಘಟನೆ ಬಗ್ಗೆ ಮೋಹಿತ್ ಅವರ ಸೋದರ ಮಾವ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.