Visitors have accessed this post 445 times.

ವಿಟ್ಲ: ರಿಕ್ಷಾಗಳ ಮಧ್ಯೆ ಅಪಘಾತ ಓರ್ವ ಮೃತ್ಯು – 9 ಮಂದಿಗೆ ಗಾಯ

Visitors have accessed this post 445 times.

ವಿಟ್ಲ: ಎರಡು ಆಟೊ ರಿಕ್ಷಾಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು 9 ಮಂದಿ ಗಾಯ ಗೊಂಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪಡಿಬಾಗಿಲು-ಅಳಿಕೆ ಸಂಪರ್ಕ ರಸ್ತೆಯ ಪಡಿಬಾಗಿಲು ದ್ವಾರದ ಬಳಿ ನಡೆದಿದೆ.

ಮೃತರನ್ನು ಅಳಕೆ ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಎಂದು ಗುರುತಿಸಲಾಗಿದೆ. ಎರುಂಬು ನಿವಾಸಿ ಹಮೀದ್ ಹಾಗೂ ಪಡಿಬಾಗಿಲು ನಿವಾಸಿ ರವಿ ಎಂಬವರಿಗೆ ಸೇರಿದ ರಿಕ್ಷಾಗಳ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *