
ಮಂಗಳೂರು: ಕಳೆದ 31ವರ್ಷಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ವಲಾಲು ನಿವಾಸಿ ಎಚ್ ಅಬೂಬಕ್ಕರ್ ನಿವೃತ್ತಿಹೊಂದಿದ್ದಾರೆ. ಮಂಗಳೂರು ಒಂದನೇ ಘಟಕಕ್ಕೆ ಚಾಲಕ ವೃತ್ತಿಗೆ ಸೇರಿಕೊಂಡ ಅವರು 1992 ರಿಂದ 1995 ರವರಗೆ ರಾಜ್ಯದೊಳಗೆ ಓಡಾಡುವ ಬಸ್ ಚಾಲಕರಾಗಿಯೂ, ನಂತರದಲ್ಲಿ ಮಂಗಳೂರು ಎರಡನೇ ಘಟಕಕ್ಕೆ ವರ್ಗಾವಣೆಗೊಂಡು 2016ರವರೆಗೆ ಅಂತರಾಜ್ಯಕ್ಕೆ ಓಡಾಡುವ ಬಸ್ಸಿನ ಚಾಲಕರಾಗಿ ಬಾಂಬೆ, ಹೈದರಾಬಾದ್, ಚೆನ್ನೈ, ತಿರುಪತಿ ಮಾರ್ಗದ ಬಸ್ಸಿನಲ್ಲಿ ಸೇವೆಸಲ್ಲಿಸಿದ್ದಾರೆ. ಸಾರಿಗೆ ಇಲಾಖೆ ಅವರ ಚಾಲಕ ವೃತ್ತಿಯಲ್ಲಿನ ಶಿಸ್ತು ಮತ್ತು ಪರಿಶುದ್ಧತೆಯನ್ನು ಕಂಡು ನಂತರದಲ್ಲಿ ಚಾಲಕ ಭೋದನೆ KMPL ಮಾಸ್ಟರ್ ಆಗಿ ಆಯ್ಕೆಮಾಡಿತ್ತು. ಏಳು ವರ್ಷ ಉತ್ತಮ ಭೋದಕರಾಗಿ ಸೇವೆ ಸಲ್ಲಿಸಿರುವ ಅವರು KSRTC ಸಂಸ್ಥೆಯ ಪ್ರಶಂಸೆಗೂ ಪಾತ್ರರಾಗಿದ್ದರು.



ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಚ್ ಅಬೂಬಕ್ಕರ್ ರವರನ್ನು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ಕಛೇರಿಯಲ್ಲಿ ಬೀಳ್ಕೊಡಲಾಯಿತು. ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. DTO ರಾಜ್ ಕಮಾಲ್ ಉಪಸ್ಥಿತರಿದ್ದರು.