ರಮ್ ಝಾನ್ ಉಪವಾಸ ಮುಗಿಸಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು…!!

ರಮ್ ಝಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಹತ್ತನೇ ತರಗತಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ನದಿಯ ರಾಮ ಮಂಟಪದ ಬಳಿ ನಡೆದಿದೆ.
ಮೃತ ಬಾಲಕರನ್ನು ರಫಾನ್, ಇಯಾನ್ ಮತ್ತು ಅರ್ಫದ್ ಎಂದು ಹೇಳಲಾಗಿದೆ.
ರಮ್ ಝಾನ್ ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಜಲು ರಫಾನ್, ಇಯಾನ್ ಮತ್ತು ಅರ್ಫದ್ ರಾಮ ಮಂಟಪದ ಬಳಿ ಹೋಗಿದ್ದಾರೆ. ಅದರಂತೆ ಈಜಲು ನೀರಿಗೆ ಇಳಿದಾಗ ಮೂವರು ಕೂಡ ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಮೂವರು ಬಾಲಕರ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದ ದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply