April 26, 2026
WhatsApp Image 2025-01-27 at 10.48.19 AM

 ರಾಜ್ಯದಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರದ ಅರ್ಚನಾ ಎಂಬುವರ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಮಹಾರಾಷ್ಟ್ರದ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಸಂಗೀತ ಗೌಳಿ, ಸಂಗೀತ ತಾವಡೆ, ಮೋಹನ್ ತಾವಡೆ ಅವರನ್ನು ಬಂಧಿಸಲಾಗಿದ್ದು, ನಂದಿನಿ ಡೋರಲೇ, ನಂದಕುಮಾರ್ ಡೋಲರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಅರ್ಚನಾ ಹಾಗೂ ರಾಜು ಮುಗ್ಗುದುಮ ಜೊತೆಗೆ ಎರಡನೇ ಮದುವೆ ಮಾಡಿಸಿ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

About The Author

Leave a Reply