Visitors have accessed this post 1879 times.

ಮಂಗಳೂರು : ಬಜರಂಗದಳ ಜಿಲ್ಲಾ ನಾಯಕ ಭರತ್ ಕುಮ್ಡೇಲು ಗಡಿಪಾರು

Visitors have accessed this post 1879 times.

ಮಂಗಳೂರು : ಬಜರಂಗದಳದ ಪುತ್ತೂರು ವಿಭಾಗದ ನಾಯಕ ಭರತ್ ಕುಮ್ಡೇಲುಗೆ ಗಡಿಪಾರು ಆದೇಶ ಜಾರಿಯಾಗಿದೆ. ಬಜರಂಗದಳ ಪುತ್ತೂರು ವಿಭಾಗದ ಸಂಯೋಜಕ ಭರತ್ ಕುಮ್ಡೇಲು ಮೇಲೆ ಕೊಲೆ, ಕೊಲೆ ಯತ್ನ, ದೊಂಬಿ, ಹಲ್ಲೆ ಮೊದಲಾದ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಭರತ್ ಕುಮ್ಡೇಲುಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ನೋಟಿಸ್ ಜಾರಿಯಾಗಿದೆ. ಭರತ್ ಕುಮ್ಡೇಲುಗೆ ಗಡಿಪಾರು ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಂಯೋಜಕ್ ಪುನೀತ್ ಅತ್ತಾವರ ಹೇಳಿಕೆ ನೀಡಿ, ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್ ಸುಮಾರು ವರ್ಷಗಳಿಂದ ಸಂಘಟನೆಯಲ್ಲಿ ಜೋಡಿಸಿಕೊಂಡು ಧರ್ಮ ರಕ್ಷಣೆ, ಗೋಸಂರಕ್ಷಣೆ, ಮಾತೆಯರ ರಕ್ಷಣೆ ಅಲ್ಲದೆ ಮಾದಕ ದ್ರವ್ಯ, ಡ್ರಗ್ಸ್ ವಿರುದ್ಧ ಕೆಲಸ ಮಾಡುತ್ತಿದ್ದರು. ಆದರೆ, ರಾಜಕೀಯ ದ್ವೇಷದಿಂದ ಚುನಾವಣೆಯ ಸಂದರ್ಭ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ಕಾಂಗ್ರೆಸ್ ಸರಕಾರದ ಷಡ್ಯಂತ್ರ ರೂಪಿಸಿ ಭರತ್ ಕುಮ್ಡೇಲ್ ಅವರಿಗೆ ಗಡಿಪಾರು ನೋಟಿಸ್ ಜಾರಿಗೊಳಿಸಿದೆ. ರಾಜ್ಯಸರ್ಕಾರದ ಈ ಹಿಂದೂ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ. ಗಡಿಪಾರು ಮೂಲಕ ಬಜರಂಗದಳ ಕಾರ್ಯಕರ್ತರನ್ನು ಧಮನಿಸುತ್ತೇವೆ ಎಂದುಕೊಂಡಿದ್ದರೆ ಅದು ಕಾಂಗ್ರೆಸ್ ಭ್ರಮೆ. ನಿಮ್ಮ ಯಾವುದೇ ದ್ವೇಷ ರಾಜಕಾರಣದ ಅಸ್ತ್ರಕ್ಕೆ ಬಜರಂಗದಳ ಕಾರ್ಯಕರ್ತರು ಹೆದರುವುದಿಲ್ಲ. ಧರ್ಮದ, ರಾಷ್ಟ್ರದ ಕೆಲಸಕ್ಕೆ ಬಜರಂಗದಳ ಕಾರ್ಯಕರ್ತರು ಯಾವಾಗಲು ಕಟಿಬದ್ಧ. ಹಾಗಾಗಿ ಈ ಗಡಿಪಾರು ನೋಟಿಸ್ ಅನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *