ಬಹುಭಾಷಾ ನಟ ಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರಲಿದ್ದಾರೆ..!!

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರು ಕೇಂದ್ರ ಸರ್ಕಾರವನ್ನು ಒಂದಲ್ಲ ಒಂದು ವಿಚಾರದಲ್ಲಿ ಟೀಕಿಸುತ್ತಲೇ ಇರುತ್ತಾರೆ.

ಕಳೆದ ಕೆಲ ಸಮಯದಿಂದ ಅವರು ಟ್ವೀಟ್‌ ಮೂಲಕವೇ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿಯೇ ಟೀಕಿಸಿದ್ದಾರೆ.

ಸೈದ್ಧಾಂತಿಕವಾಗಿ ತನ್ನ ವಿಚಾರಗಳನ್ನು ಹೇಳುವ ಪ್ರಕಾಶ್‌ ಅನೇಕರ ಟೀಕೆಗೂ ಒಳಗಾಗಿದ್ದಾರೆ.

ಪ್ರಕಾಶ್‌ ರಾಜ್‌ ಬಿಜೆಪಿಗೆ ಸೇರುತ್ತಾರೆ ಎನ್ನುವ ಟ್ವೀಟ್‌ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ʼದಿ ಸ್ಕಿನ್‌ ಡಾಕ್ಟರ್‌ʼ ಎನ್ನುವ ಟ್ವಿಟರ್‌ ಬಳಕೆದಾರರೊಬ್ಬರು ‘ಶ್ರೇಷ್ಠ ನಟ ಪ್ರಕಾಶ್‌ ರಾಜ್‌ ಅವರು ಇಂದು ಬಿಜೆಪಿಗೆ ಸೇರಲಿದ್ದಾರೆʼ ಎನ್ನುವ ಟ್ವೀಟ್‌ ವೊಂದನ್ನು ಮಾಡಿದ್ದಾರೆ.

ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಟ್ವೀಟ್‌ ಗೆ ಸ್ವತಃ ಪ್ರಕಾಶ್‌ ರಾಜ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ನನ್ನನ್ನು ಖರೀದಿಸುವಷ್ಟು (ಸೈದ್ಧಾಂತಿಕವಾಗಿ) ಅವರು ಶ್ರೀಮಂತರಲ್ಲ ಎಂದು ಅರಿತುಕೊಂಡಿರಬೇಕು.. ನಿಮ್ಮ ಅಭಿಪ್ರಾಯವೇನು ಸ್ನೇಹಿತರೇ” ಎಂದು ಪ್ರಕಾಶ್‌ ರಾಜ್‌ ಬರೆದುಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಈ ಹಿಂದೆ ಚಂದ್ರಯಾನ ಹಾಗೂ ಪ್ರಧಾನಿ ಅವರನ್ನು ಹೋಲಿಸಿಕೊಂಡು ಟ್ವೀಟ್‌ ಮಾಡಿ ಟೀಕೆಗೆ ಗುರಿಯಾಗಿದ್ದರು. ಇದಲ್ಲದೇ ಇತ್ತೀಚೆಗೆ ಪ್ರಧಾನಿ ಅವರು ನವಿಲಿನ ಜೊತೆ ಹಾಕಿದ ಫೋಟೋಗೆ ಹಾಕಿ ಹುಷಾರ್ರಪ್ಪಾ..!!! ಮೊದ್ಲು ಕಾಳಾಕಿ.. ಆಮೇಲೆ ಪುಕ್ಕ ಕಿತ್ಕೊತಾರೆ ಎಂದು ಬರೆದು ಟೀಕಿಸಿದ್ದರು.

Leave a Reply