August 30, 2025
WhatsApp Image 2024-04-25 at 9.14.10 AM

ಮಂಗಳೂರು: ಸೋಲುವ ಹತಾಶೆಯಲ್ಲಿ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸೋಲುತ್ತೇವೆ ಅಂದಾಗ ಬಿಜೆಪಿ ಅಪಪ್ರಚಾರದಲ್ಲಿ ತೊಡಗುವುದು ಎಂದಿನ ಚಾಳಿ. ಕಳೆದ 33 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾವ ಅಭಿವೃದ್ಧಿಯೂ ಆಗಿಲ್ಲ. ಜನರ ಒಲವು ಕಾಂಗ್ರೆಸ್ ಕಡೆಗಿದೆ. ಆದ್ದರಿಂದ ಬಿಜೆಪಿ ಸೋಲುವ ಭೀತಿಯಲ್ಲಿದೆ‌. ಈ ಹತಾಶೆಯಲ್ಲಿ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ ಎಂದರು. 33ವರ್ಷಗಳಲ್ಲಿ ಬಿಜೆಪಿಯ ಸಾಧನೆ ಶೂನ್ಯ.

ಜಾತಿಜಾತಿಗಳ ನಡುವೆ ಸಂಘರ್ಷ ಏರ್ಪಡಿಸುವುದು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಪ್ರಶ್ನಿಸಿದರೆ ಅವರಲ್ಲಿ ಉತ್ತರವಿಲ್ಲ. ಹಿಂದುತ್ವ ಹಾಗೂ ಮೋದಿ ಬಿಟ್ಟರೆ ಅವರಲ್ಲಿ ಯಾವ ವಿಚಾರವೂ ಇಲ್ಲ. ಇದು ದೇಶಪ್ರೇಮಿಗಳು ಹಾಗೂ ದೇಶದ್ರೋಹಿಗಳ ನಡುವಿನ ಚುನಾವಣೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ, ಜಾತಿಜಾತಿಗಳ ನಡುವೆ ವೈಷಮ್ಯ ಉಂಟು ಮಾಡಿ ಯುವಕರನ್ನು ಕಾನೂನುಬಾಹಿರ ಕೆಲಸ ಮಾಡುವಂತೆ ಮಾಡಿ ಜೈಲುಕಂಬಿ ಎಣಿಸುವ, ಕೋರ್ಟಿಗೆ ಅಲೆದಾಡುವ, ಹತ್ಯೆಯಾಗುವ ಕಾರ್ಯ ಮಾಡುತ್ತಿದೆ. ಈ ಮೂಲಕ ಅಷ್ಟು ಮನೆಗಳನ್ನು ಅನಾಥರನ್ನಾಗಿಸಿದ ಬಿಜೆಪಿ ದೇಶಪ್ರೇಮಿಯೇ, ಅಥವಾ ದೇಶದ್ರೋಹಿಯೇ ಎಂದು ಪ್ರಶ್ನಿಸಿದರು‌. ವಿವಿಧ ಕ್ಷೇತ್ರಗಳ ನುರಿತರು, ಅನುಭವಗಳನ್ನು ಕರೆತಂದು ನೀಲಿನಕಾಶೆಯನ್ನು ತಯಾರಿಸಿ ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುವ ಗುರಿಯಿದೆ ಎಂದು ಪದ್ಮರಾಜ್ ಆರ್ ಪೂಜಾರಿ ಹೇಳಿದರು.

About The Author

Leave a Reply