August 30, 2025
WhatsApp Image 2024-05-01 at 10.48.19 AM

ಬೆಂಗಳೂರು: ದೇಶದ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 19 ರೂಪಾಯಿ ಇಳಿಸಿವೆ. ಈ ಮೂಲಕ ಕಮರ್ಷಿಯಲ್ ಸಿಲಿಂಡರ್ ಗ್ರಾಹಕರಿಗೆ ಕೊಂಚ ರಿಲಿಫ್ ಸಿಕ್ಕಿದೆ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,745.5 ರೂಪಾಯಿಗೆ ಇಳಿಕೆ ಆಗಿದೆ. ಪ್ರತಿ ತಿಂಗಳ ಮೊದಲ ದಿನವೇ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಣೆ ಮಾಡುತ್ತವೆ. ಅಂತೆಯೇ ಈ ಮೇ ಮೊದಲ ದಿನ ಗ್ರಾಹಕರಿಗೆ ತೈಲ ಕಂಪನಿಗಳು ಗುಡ್​ನ್ಯೂಸ್ ನೀಡಿವೆ.

ಮುಂಬೈನಲ್ಲಿ 1698.50 ರೂಪಾಯಿ ಆಗಿದ್ದರೆ, ಕೋಲ್ಕತ್ತದಲ್ಲಿ 1859 ರೂಪಾಯಿ ಹಾಗೂ ಚೆನ್ನೈನಲ್ಲಿ 1911 ರೂಪಾಯಿ ಆಗಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಪ್ರಿಲ್ ತಿಂಗಳಿನಲ್ಲೂ ಇಳಿಕೆ ಮಾಡಲಾಗಿತ್ತು. ಹಿಂದಿನ ತಿಂಗಳ 30.50 ರೂಪಾಯಿ ಇಳಿಕೆಯಾಗಿತ್ತು.

About The Author

Leave a Reply