Visitors have accessed this post 1323 times.

ಪ್ರಜ್ವಲ್ 600 ಹುಡುಗಿಯರ ಸೀರೆ ಎಳೆದಿದ್ದಾನೆ; ಅವ್ರು ಗರ್ಭಿಣಿ ಆದ್ರೆ ಅವರ ಮಕ್ಕಳಿಗೆ ಪರಿಹಾರ ಕೊಡೋದು ಯಾರು?

Visitors have accessed this post 1323 times.

ಪ್ರಜ್ವಲ್ ರೇವಣ್ಣ 600 ಹುಡುಗಿಯರ ಸೀರೆ ಎಳೆದಿದ್ದಾನೆ, ಪಿನ್ ಚುಚ್ಚಿದ್ದಾನೆ. ಈ ಬಗ್ಗೆ ಬಿಎಸ್‌ ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ ಯಾಕೆ ಮಾತಾಡಿಲ್ಲ? ಇದೇನಾ ಅಚ್ಚೇದಿನ್ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ” ಪ್ರಜ್ವಲ್ರನ್ನ ಪಕ್ಷದಿಂದ ಹೊರಗಡೆ ಹಾಕುತ್ತೀವಿ ಎನ್ನುತ್ತಾರೆ. ಅವರು ಗರ್ಭಿಣಿ ಆದ ಮೇಲೆ ಹೊರಗಡೆ ಹಾಕಿದರೇನು, ಅವರ ಮಕ್ಕಳಿಗೆ ಪರಿಹಾರ ಕೊಡುವುದು ಯಾರು?, ನಾನು ಆವತ್ತೆ ದೇವೆಗೌಡರಿಗೆ ಹೇಳಿದ್ದೆ, ಇವತ್ತು ಅವನು ಜರ್ಮನಿಗೆ ಹೋಗಿದ್ದಾನೆ. ಯಾವ ವಿಡಿಯೋ ಬರತ್ತೋ ,ಇನ್ನೆಲ್ಲಿ ಹೋಗ್ತಾನೋ ಗೊತ್ತಿಲ್ಲ ” ಎಂದರು.

ಪ್ರಜ್ವಲ್‌ನನ್ನು ಪಕ್ಷದಿಂದ ಹೊರಹಾಕಿದ್ರೆ ಮುಗಿತಾ ಆ ಹೆಣ್ಣು ಮಕ್ಕಳಿಗೆ ಪರಿಹಾರ ಕೋಡೋದು ಯಾರು? ” ಎಂದು ಪ್ರಶ್ನಿಸಿದರು. ” ಇದಕ್ಕೆ ಉತ್ತರ ಸಿಗಬೇಕು ಅಂದ್ರೆ ಚುನಾವಣೆಯಲ್ಲಿ ಉತ್ತಮವಾದವರನ್ನು ಆಯ್ಕೆ ಮಾಡಬೇಕು ” ಎಂದು ಹೇಳಿದರು.

ಈಗಾಗಲೇ ಎಲ್ಲೆಡೆ ಮೋದಿ ಅಲೆ ಕಡಿಮೆ ಆಗಿದೆ. ಬೆಂಗಳೂರಂತಹ ಮಹಾನಗರದಲ್ಲಿ ಮತದಾನ ಕಡಿಮೆ ಆಗಿದೆ. ಇದನ್ನು ನೋಡಿ ಆದರೂ ಮೋದಿ ರಾಜೀನಾಮೆ ಕೊಡಬೇಕು. ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸರಿಯಿಲ್ಲ. ಆದರೆ, ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *