Visitors have accessed this post 241 times.
ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ಹೋಟೆಲ್ ವೈಟರ್‌ನಿಂದ ಲಕ್ಷಾಂತರ ರೂ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ಹೆಜಮಾಡಿಯ ಕ್ರಿಸ್ಟನ್ ಡಿ’ಸೋಜಾ ವಂಚನೆಗೊಳಗಾದವರು. ಹೂಡೆಯ ಹೋಟೆಲ್‌ವೊಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿರುವ ಇವರಿಗೆ ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರೆ ಬಂದಿತ್ತು. ಸುಮಿತ್ ಹಾಗೂ ಸುಭಾಸ್ ಚೌವ್ಹಾಣ್ ತಾವು ಮ್ಯಾನೇಜರ್‌ಗಳು ಎಂದು ಪರಿಚಯಿಸಿಕೊಂಡು ಹಣವನ್ನು ಕೇಳಿ ಗೂಗಲ್ ಪೇ ಮೂಲಕ ಒಟ್ಟು 4,42,645 ರೂ. ಪಡೆದು ಉದ್ಯೋಗವನ್ನೂ ಕೊಡಿಸದೆ ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.