October 22, 2025
WhatsApp Image 2024-05-15 at 12.22.32 PM

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ಘನಘೋರ ಘಟನೆ ನಡೆದಿದೆ. ಯುವಕನೊಬ್ಬ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಯುವತಿಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಚಾಕುವಿನಿಂದ ಇರಿದು ಅಂಜಲಿ ಅಂಬಿಗರ ಎನ್ನುವ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಸುಕಿನ ವೇಳೆ ಯುವತಿ ಮಲಗಿದ್ದಾಗ ಆಕೆಯ ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಶ್ವ ಅಲಿಯಾಸ್ ಗಿರೀಶ್ ಕೊಲೆ ಮಾಡಿದ ಆರೋಪಿ. ಕೊಲೆಯಾದ ಅಂಜಲಿಗೆ ಆತ ಕೆಲ ದಿನಗಳ ಹಿಂದೆ ಧಮ್ಕಿ ಹಾಕಿದ್ದು ನೇಹಾ ಕೊಂದಂತೆ ನಿನ್ನನ್ನು ಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ಇದೀಗ ನಸುಕಿನ ಜಾವ ಅಂಜಲಿ ಮನೆಗೆ ಬಂದು ಮನೆಯವರ ಎದುರಲ್ಲಿಯೇ ವಿಶ್ವ, ಅಂಜಲಿಗೆ ಹಲವಾರು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.

About The Author

Leave a Reply