Visitors have accessed this post 1327 times.

ಮುಡಿಪು: ಎಂಡಿಎಂಎ ವಶ– ಇಬ್ಬರು ಆರೋಪಿಗಳ ಬಂಧನ

Visitors have accessed this post 1327 times.

ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ಕ್ರಾಸ್ ರಸ್ತೆಯ ಬಳಿ ಇರುವ ಮೈದಾನದಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎಯನ್ನು ಮೋಟಾರು ಸೈಕಲ್ ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್ ರವರ ನೇತೃತ್ವದ ತಂಡ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಮೂಲತಃ ನಂದರ ಪಡ್ಪುವಿನಲ್ಲಿ ವಾಸವಿದ್ದ ಪ್ರಸಕ್ತ ಕೆದುಂಬಾಡಿ ನಿವಾಸಿ ನಿಯಾಝ್ ಯಾನೆ ನಿಯಾ( 27) ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಿವಾಸಿ , ಪ್ರಸಕ್ತ ಬಾಳೆಪುಣಿಯಲ್ಲಿ ವಾಸವಿರುವ ಜೋರ್ಡನ್ (19 ) ಎಂದು ಗುರುತಿಸಲಾಗಿದೆ.

ಬಂಧಿತರ ವಶದಲ್ಲಿದ್ದ ಸುಮಾರು 20,000/- ಮೌಲ್ಯದ 10.86 ಗ್ರಾಂ ಎಂಡಿಎಂಎ, ಎರಡು ಮೊಬೈಲ್ ಫೋನ್ ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರು ಸೈಕಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 37,500 ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಿಷನರ್ ಅನುಪಮ್ ಅಗರ್ವಾಲ್, ಐ.ಪಿ.ಎಸ್‌ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಶ್ರೀ ಸಿದ್ಧಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್‌ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಶ್ರೀಮತಿ ಧನ್ಯ ಎನ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಂದ್ರ ಸಿ.ಎಂ, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಸಿಬ್ಬಂದಿಗಳಾದ ಎಎಸ್‌ಐ ಸಂಜೀವ, ಎಚ್.ಸಿ ರಾಮ ನಾಯ್ಕ, ಮುಹಮ್ಮದ್ ಶರೀಫ್, ರೇಶ್ಮಾ, ಸುರೇಶ್, ಬಸವನಗೌಡ, ಪ್ರಶಾಂತ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *