
ತಿರುಪತಿ ದರ್ಶನಕ್ಕೆಂದು ಹೋಗುತ್ತಿದ್ದವರ ಕಾರು ಅಪಘಾತವಾಗಿ ನಾಲ್ವರು ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.



ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ಘಟನೆ ನಡೆದಿದೆ. ಮೃತರನ್ನು ಸುರೇಶ ವೀರಪ್ಪ, ಐಶ್ವರ್ಯ ಈರಪ್ಪ ಬಾರ್ಕಿ, ಚೇತನಾ ಪ್ರಭುರಾಜ ಸಮಗಂಡಿ, ಪವಿತ್ರಾ ಪ್ರಭುರಾಜ ಸಮಗಂಡಿ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.