Visitors have accessed this post 633 times.

ಯೋಗೀಶ್ ಶೆಟ್ಟಿ ಜಪ್ಪು ರವರನ್ನು ಭೇಟಿಯಾಗಿ ಚುನಾವಣೆಗೆ ಬೆಂಬಲಿಸುವಂತೆ ಕೋರಿದ ಡಾ.ಶೇಕ್ ಬಾವ

Visitors have accessed this post 633 times.

ಕರ್ನಾಟಕ ರಾಜ್ಯ ವಿಧಾನಪರಿಷತ್ ಚುನಾವಣೆ ಜೂನ್ 3 ರಂದು ನಡೆಯುತ್ತಿದ್ದು ನೈರುತ್ಯ ಪದವೀಧರ ಕ್ಷೇತ್ರ ದಿಂದ ಡಾ. ಶೇಕ್ ಬಾವ ರವರು ಸ್ಪರ್ಧಿಸುತ್ತಿದ್ದು ಬಾವ ರವರು ಮ್ಯಾನೇಜ್ಮೆಂಟ್ ರಿಸರ್ಚ್ ಸ್ಟಡೀಸ್ ನಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದಿದ್ದು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಕೇರಳ ದಲ್ಲಿ ಎಂಬಿಎ ಪದವೀಧರರಾಗಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಚುನಾವಣಾ ಕಣದಲ್ಲಿರುವ ಬಾವರವರು ಎರಡು ದಶಕಗಳಿಂದ ವಿದ್ಯಾರ್ಥಿ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಯಶಸ್ವಿಯಾಗಿರುವ ಜಿಲ್ಲಾ ಮತ್ತು ರಾಜ್ಯ ಸರಕಾರದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ತುಳುನಾಡಿನ ಪ್ರಖ್ಯಾತ ಸಂಘಟನೆ ಮುಖ್ಯಸ್ಥರಾಗಿರುವ ಶ್ರೀ ಯೋಗೇಶ್ ಶೆಟ್ಟಿ ಜಪ್ಪು ರವರನ್ನು ಭೇಟಿಯಾಗಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿರುತ್ತಾರೆ. ಈ ಬೆಳವಣಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಮತಗಳ ಲೆಕ್ಕಾಚಾರ ವ್ಯತ್ಯಾಸ ಮಾಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *