ರಾಜ್ಯಾದ್ಯಂತ ಪ್ರಕರಣ ಭಾರೀ ಸದ್ದು ಮಾಡಿತ್ತು. ಈ ಹಿನ್ನೆಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಉಡುಪಿ ಹೈವೇಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ – ಗರುಡ ಗ್ಯಾಂಗ್‍ನ 6 ಪುಡಿ ರೌಡಿಗಳು ಅರೆಸ್ಟ್
ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಶಾರದಾ ಮಂಟಪ ಜಂಕ್ಷನ್ ಬಳಿ ಲಾಂಗ್ ಹಿಡಿದು ಅಟ್ಟಹಾಸ ಮೆರೆದಿದ್ದ ಗರುಡ ಗ್ಯಾಂಗ್‍ನ 6 ಪುಡಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೇ 25 ರಂದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರನ್ನು ಮಜೀದ್, ಅಲ್ಫಾಝ್, ಶರೀಫ್ ಎಂದು ಉಡುಪಿ ಎಸ್‍ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿ ಕಾಪುವಿನ ಕೊಂಬಗುಡ್ಡೆಯ ಆಶಿಕ್ ತೋನ್ಸೆಯ ರಾಕೀಬ್, ಸಕ್ಲೈನ್ ಈಗಾಗಲೇ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.