October 23, 2025
WhatsApp Image 2024-05-28 at 12.40.17 PM

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಠಾಣೆ ಎಂಟ್ರಿ ಹಾಗು ಮನೆಯಲ್ಲಿ ನಡೆದ ಹೈಡ್ರಾಮ ಪ್ರಕರಣ ಬಗ್ಗೆ ಎಸ್ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಮನೆಗೆ ಮೊದಲು‌ ಮೂರೇ ಜನ ಪೊಲೀಸರನ್ನು ಕಳುಹಿಸಿದ್ವಿ. ಅವರನ್ನು ವಿಚಾರಣೆಗೆ ಬರಲು‌ ನೋಟೀಸ್ ನೀಡಲು ಹೋಗಲಾಗಿತ್ತು.

ಅವರ ಮನೆಯಲ್ಲಿ ಜನರು ಸೇರುವುದನ್ನು ನೋಡಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು.

ಹಾಗಂತ ಪೊಲೀಸರು ಅಲ್ಲಿಂದ ಓಡಿ ಹೋಗಿದ್ದಲ್ಲ. ಜನಪ್ರತಿನಿಧಿಗಳ ಮನವಿಯ ಹಿನ್ನಲೆಯಲ್ಲಿ ಪೊಲೀಸರು ವಾಪಾಸ್ ಬಂದಿದ್ದು. ಶಾಸಕರ ಒಂದು ಕೇಸ್ ಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಠಾಣೆಯಲ್ಲಿ ಶಾಸಕರ ಜೊತೆಗಿದ್ದವರೆಲ್ಲರೂ ಆರೋಪಿಗಳಾಗ್ತಾರೆ ಎಂದು ಹೈಡ್ರಾಮದ ಬಗ್ಗೆ ಎಸ್ಪಿಯವರು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಸೈಬರ್‌ ಕ್ರೈಂ ಕುರಿತು ಮಾಹಿತಿ ಹಂಚಿಕೊಂಡ ಎಸ್ಪಿ ರಿಷ್ಯಂತ್ ಅವರು, ನಿಮಗೆ ಹಣ ಹಾಕಿ ಆಮೇಲೆ ಹಣ ದೋಚ್ತಾರೆ. ಜಾಹೀರಾತು ಕ್ಲಿಕ್ ಮಾಡಿ ಮೋಸ ಹೋಗಬೇಡಿ. ನಿಮ್ಮ ಅಕೌಂಟ್ ಗೆ ಕನ್ನ ಹಾಕುವವರ ಐಡಿಯಾಗಳೇ ಭಯ ಬೀಳಿಸುತ್ತೆ. ನಿಮ್ಮ‌ ಬರಹಕ್ಕೆ ಅವರೇ ಹಣ ಕೊಟ್ಟು ಆಮೇಲೆ ನಿಮ್ಮ ಅಕೌಂಟ್ ಗೆ ಕನ್ನ ಹಾಕ್ತಾರೆ. ನಿಮ್ಮ ಮೇಲೆ ಕೇಸಿದೆ, ನಿಮಗೊಂದು ಪಾರ್ಸೆಲ್ ಬಂದಿದೆ ಅಂತ ಮೋಸ ಮಾಡ್ತಾರೆ. ಹಾಗಾಗಿ ಸೈಬರ್ ಕ್ರೈಮ್ ಗಳ ಬಗ್ಗೆ ಎಚ್ಚರ ಇರಲಿ ಎಂದು ತಿಳಿ ಹೇಳಿದರು.

About The Author

Leave a Reply