ಸುರತ್ಕಲ್: MRPL ನಲ್ಲಿ 120 ಅಡಿ ಮೇಲಿನಿಂದ ಬಿದ್ದು ಕಾರ್ಮಿಕ ಸಾವು

ಸುರತ್ಕಲ್: ನೀರು ಸೋರುವಿಕೆ ಸರಿಪಡಿಸಲೆಂದು ಮೇಲೆ ಹೋಗಿದ್ದ ಕಾರ್ಮಿಕರೊಬ್ಬರು 120 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವ ಘಟನೆ ಎಂಆರ್ ಪಿಎಲ್ ನಲ್ಲಿ ಮಂಗಳವಾರ ನಡೆದಿದೆ. ಜಾರ್ಖಾಂಡ್ ನ ರಾಂಚಿ ಜಿಲ್ಲೆ ಮೂಲದ ಮಾಂಗ್ರ ಓರನ್ (38) ಮೃತಪಟ್ಟ ವ್ಯಕ್ತಿ. ಕಳೆದ 10 ವರ್ಷಗಳಿಂದ ಮಾಂಗ್ರ ಓರನ್ ಅವರು ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು‌. ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೇ 27ರಂದು ರಾತ್ರಿ 9ಗಂಟೆಗೆ ಎಂ ಆರ್ ಪಿ ಎಲ್ ನಲ್ಲಿ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡೋ ಕ್ಯಾಕರ್ ನಲ್ಲಿ ನೀರಿನ ವೇಗ ಪರಿಶೀಲಿಸಲು ಮಾಂಗ್ರ ಓರನ್ ಮೇಲೆ ಹತ್ತಿದ್ದರು. ಈ ವೇಳೆ ಅಲ್ಲಿ ನೀರಿನ ಸೋರುವಿಕೆ ಕಂಡುಬಂದಿತ್ತು. ಅದನ್ನು ಸರಿಪಡಿಸಲೆಂದು ಹೋದಾಗ ಸೋರುವಿಕೆ ಆಗುತ್ತಿದ್ದ ವೇಳೆ ನೀರಿನ ಹರಿವು ಏಕಾಏಕಿ ಹೆಚ್ಚಾಗಿ ಮಾಂಗ್ರ ಓರನ್ 120 ಅಡಿ ಮೇಲಿನಿಂದ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಅಲ್ಲಿನ ಸಿಬ್ಬಂದಿ ಮಾಂಗ್ರ ಓರನ್ ರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

Leave a Reply