ಕರ್ನಾಟಕ ರಾಜ್ಯ ವಿಧಾನಪರಿಷತ್ ಚುನಾವಣೆ ಜೂನ್ 3 ರಂದು ನಡೆಯುತ್ತಿದ್ದು ನೈರುತ್ಯ ಪದವೀಧರ ಕ್ಷೇತ್ರ ದಿಂದ ಡಾ. ಶೇಕ್ ಬಾವ ರವರು ಸ್ಪರ್ಧಿಸುತ್ತಿದ್ದು ಬಾವ ರವರು ಮ್ಯಾನೇಜ್ಮೆಂಟ್ ರಿಸರ್ಚ್ ಸ್ಟಡೀಸ್ ನಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದಿದ್ದು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಕೇರಳ ದಲ್ಲಿ ಎಂಬಿಎ ಪದವೀಧರರಾಗಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಚುನಾವಣಾ ಕಣದಲ್ಲಿರುವ ಬಾವರವರು ತುಳುನಾಡ ರಕ್ಷಣಾ ವೇದಿಕೆ ಕಚೇರಿಗೆ ತೆರಳಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರಲ್ಲಿ
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿರುತ್ತಾರೆ. ಶಿಕ್ಷಣ ತಜ್ಞ ಸುಕೇಶ್ ಉಚ್ಚಿಲ್ ಉಪಸ್ಥಿತರಿದ್ದರು