
ಕಾಲೇಜಿನಲ್ಲಿ ಜೈ ಶ್ರೀರಾಮ್ ಎಂಬಂತ ಹಾಡು ಹಾಕಿದ್ದಕ್ಕೆ ಹಿಂದೂ ಮುಸ್ಲೀಂ ವಿದ್ಯಾರ್ಥಿಗಳ ನಡುವೆ ಕಿರಿಕ್ ಆಗಿದೆ. ಈ ಗಲಾಟೆ ತಾರಕ್ಕೇರಿ, ಪರಸ್ಪರ ಹೊಡೆದಾಡಿಕೊಂಡ ಘಟನೆ ಬೀದರ್ ನ ಜಿಎನ್ ಡಿ ಕಾಲೇಜಿನಲ್ಲಿ ನಡೆದಿದೆ.



ಬೀದರ್ ನಗರದ ಜಿಎನ್ ಡಿ ಕಾಲೇಜಿನಲ್ಲಿ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಮುಸ್ಲೀಂ ವಿದ್ಯಾರ್ಥಿಗಳು ತಕರಾರು ತೆಗೆದಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ವಿದ್ಯಾರ್ಥಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಜಿಎನ್ ಡಿ ಕಾಲೇಜಿನ ಕ್ಯಾಂಪಸ್ ಒಳಗಡೆ ಇರುವಂತ ಕಾಲೇಜು ಸಭಾಂಗಣದಲ್ಲಿ ನಡೆದಂತ ಗಲಾಟೆಯ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬೀದರ್ ನ ಜಿಎನ್ ಡಿ ಕಾಲೇಜಿನ ಘಟನಾ ಸ್ಥಳಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.