Visitors have accessed this post 271 times.
ಮಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಹಕರಿಸುತ್ತೇನೆಂದು ಬಂದು ಲಾಡ್ಜ್‌ನಲ್ಲಿ, ಆಸ್ಪತ್ರೆಯಲ್ಲಿ ಅತ್ಯಾಚಾರಗೈದಿರುವ ಆರೋಪದ ಮೇಲೆ ಮಂಗಳೂರು ಪೊಲೀಸರು ಕೇರಳದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕೇರಳ ಹೊಸದುರ್ಗಾದ, ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ. ಕಾಸರಗೋಡು ಮೂಲದ ಸಂತ್ರಸ್ತೆ ಮಾ.13ರಂದು ಪಿಸ್ತೂಲ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸುಜಿತ್ ನೊಂದಿಗೆ ಬಂದಿದ್ದರು. ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ರೂಮ್ ಸಂಖ್ಯೆ 48ರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.16ರಂದು ರಾತ್ರಿ 8ಗಂಟೆಗೆ ಸುಜಿತ್ ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ತೆಗೆದು ಅತ್ಯಾಚಾರ ಮಾಡಿ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎ.4ರಂದು ಈ ನಗ್ನ ಪೋಟೋಗಳನ್ನು ಆಕೆಗೆ ತೋರಿಸಿದ ಸುಜಿತ್ ಮತ್ತೆ ಮಂಗಳೂರಿಗೆ ಬರುವಂತೆ ಒತ್ತಾಯವಾಗಿ ಕರೆದುಕೊಂಡು ಬಂದಿದ್ದಾನೆ. ಅದರಂತೆ ಎ.4 ರಿಂದ 8 ರವರೆಗೆ ನಗರದ ಮಹಾರಾಜಾ ರೆಸಿಡೆನ್ಸಿ ಹೋಟೆಲ್ ನಲ್ಲಿ ಇದ್ದುಕೊಂಡು ಹೆದರಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವೇಳೆಯೂ ನಗ್ನ ಪೋಟೋಗಳನ್ನು ತೆಗೆದುಕೊಂಡಿದ್ದ. ಅಲ್ಲದೆ ಎ. 8ರಿಂದ ಮೇ 10ರವರಿಗೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಯೂ ಸುಜಿತ್ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರ ಯಾರಲ್ಲಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿದೆ. ಇದೀಗ ಸಂತ್ರಸ್ತೆ ಪೊಲೀಸ್‌ರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.