August 30, 2025
WhatsApp Image 2024-04-29 at 2.55.22 PM

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅರೆಸ್ಟ್‌ ಫಿಕ್ಸ್‌ ಆಗಿದ್ದು, ಈ ನಡುವೆ ಪೊಲೀಸ್‌ ಕಚೇರಿಯಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತ ಬಿ,ದಯಾನಂದ್‌ ಮತ್ತು ಸಿಐಡಿ ಮುಖ್ಯಸ್ಥ ಬಿ.ಕೆ ಸಿಂಗ್‌ ಅವರು ಭದ್ರತ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದಲ್ಲದೇ ಎಸ್‌ಐಟಿ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲಿ ಬಂಧಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಇಂಟರ್ ಪೋಲ್ ಕೂಡ ಇರೋದೆ ಅದಕ್ಕಾಗಿ. ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿಕೊಂಡು ಬಂದಂಗೆ ಅಲ್ಲ. ಕಾನೂನು ಪ್ರಕಾರ ವಾರೆಂಟ್ ಜಾರಿಯಾಗಿದೆ ಅಂಥ ಹೇಳಿದರು.

ಇನ್ನೂ ಇನ್ನೂ ಪಾಸ್‌ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕಾನೂನು ಪ್ರಕ್ರಿಯೆ ನೋಡಿ ರದ್ದು ಮಾಡ್ತಾರೆ. ಈ ಪ್ರಕ್ರಿಯೆಯಲ್ಲಿ ನಿಧಾನಗತಿ ಆಗಿದೆ. ಈಗ ರದ್ದು ಮಾಡುತ್ತೇವೆ ಎಂದಿದ್ದಾರೆ ಅಂಥ ಕೇಂದ್ರ ಸಚಿವರು ಹೇಳಿದ್ದಾರೆ. ಪ್ರಜ್ವಲ್‌ ರೇವಣ್ಣನವರು ಹೇಳಿರುವ ವಿಡಿಯೋ ಸಂದೇಶವನ್ನು ನಾನು ನೋಡಿದ್ದೇವೆ, ಒಂದು ವೇಳೆ ಅವರು ಬಾರದೇ ಇದಲ್ಲಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಅಂಥ ತಿಳಿಸಿದರು.

About The Author

Leave a Reply