ಮಂಗಳೂರು : ತುಂಬೆಯಿಂದ ನಗರಕ್ಕೆ ನೀರು ಪೂರೈಕೆಯ ಕೊಳವೆಗೆ ಹಾನಿ..!

ಬಂಟ್ವಾಳದ ತುಂಬೆಯಿಂದ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಯು ಹಾನಿ ಉಂಟಾಗಿದ್ದು,  ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗೇಲ್ ಕಂಪನಿಯ ಅವಂತಾರದಿಂದ ಕುಡಿಯುವ ನೀರಿನ ಕೊಳವೆ ಬಾವಿ ಹಾನಿಯಾಗಿದ್ದು, ಪಾಲಿಕೆ ವ್ಯಾಪ್ತಿಯ ೨೦ ವಾರ್ಡ್‌ಗಳಿಗೆ ನೀರಿಲ್ಲದೇ ಸಮಸ್ಯೆ ಎದುರಾಗಿದೆ.

ತುಂಬೆಯಿಂದ ಮಂಗಳೂರಿನ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಯು ಹಾನಿ ಉಂಟಾಗಿದ್ದು, ಗೇಲ್ ಕಂಪನಿಯ ಕಾಮಗಾರಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಆಗ್ತಾ ಇದೆ, ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಕಳೆದ ರಾತ್ರಿ ಗೇಲ್ ಕಂಪನಿಯ ಅವಂತಾರದಿಂದಾಗಿ ಪೈ ಲೈನ್ ಹೊಡೆದು ಹೋಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಮಂಗಳೂರು ನಗರಕ್ಕೆ ಮೂರು ದಿನ ಕುಡಿಯುವ ನೀರು ಇಲ್ಲದಂತಾಗಿದೆ ಎಂದು ಹೇಳಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ನೀರು ಸರಬರಾಜು ಹಾನಿಯಾಗಿದೆ. ಇದನ್ನು ಸರಿಪಡಿಸಲು ೩ರಿಂದ ೪ ದಿನಗಳ ಆಗುವ ಸಾಧ್ಯತೆ ಇದೆ. ಈ ಬಗೆ ಪಾಲಿಕೆ ಆಯುಕ್ತರ ಹತ್ತಿರ ಚರ್ಚೆ ಮಾಡಿದ್ದೇನೆ, ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕೆಂದರು.
ಪಾಲಿಕೆ ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಗೇಲ್ ಗ್ಯಾಸ್ ಕಂಪನಿಯು ರಸ್ತೆಯನ್ನು ಅಗೆದು ಕುಡಿಯುವ ಪೈ ಲೈನ್ ಹೊಡೆದು ಹೋಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ೨೦ ವಾರ್ಡ್‌ಗಳಿಗೆ ನೀರು ಸರಬರಾಜು ಸ್ಥಗಿತವಾಗಿದೆ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ತ್ವರಿತ ರೀತಿಯಲ್ಲಿ ಕಾಮಗಾರಿ ಆಗ್ತಾ ಇದೆ. ಗೇಲ್ ಕಂಪನಿಯು ಮಂಗಳೂರು ಮಹಾನಗರ ಪಾಲಿಕೆಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು, ಈ ಸಂದರ್ಭ ಆಯುಕ್ತರಾದ ಕೆ.ಅನಂದ್, ಪಾಲಿಕೆ ಸದಸ್ಯ ಲಾನ್ಸಿಲೋಟ್ ಪಿಂಟೋ, .ಆಶ್ರಫ್ ಬಜಲ್, ಅಬ್ದುಲ್ ರವೂಫ್ ಮೊದಲಾದರು ಉಪಸ್ಥಿತರಿದ್ದರು.

Leave a Reply