ಹಾಸನ : ಇತ್ತೀಚಿಗೆ ಹಾಸನ ಜಿಲ್ಲೆಯ ಶಿರಾಡಿ ಘಾಟ್ ನಲ್ಲಿ ನಿರಂತರ ಭೂಕುಸಿತವಾಗುತ್ತಿದ್ದು, ಇಂದು ಕೂಡ ಭೂ ಕುಸಿತ ಉಂಟಾಗಿ ಟ್ರಕ್ ಒಂದು ಸಿಲುಕಿತ್ತು. ಸಕಲೇಶಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ ದೊಡ್ಡತಪ್ಪಲೆ ಬಳಿ ಇಂದು ಸಂಜೆ ಭಾರೀ ಭೂಕುಸಿತ ಸಂಭವಿಸಿದ್ದು ಸಂಚಾರ ಸ್ಥಗಿತವಾಗಿದೆ.
ಇದೆ ವೇಳೆ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿ, ಕೆಸರಿನಲ್ಲಿ ಸಿಲುಕಿದ್ದ ಟ್ರಕ್‌ನ್ನು ಹೊರ ತೆಗೆಯಲಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮಳೆಯಾಗುತ್ತಿದ್ದುದರಿಂದ ಒಂದು ಬದಿಯಿಂದ ಮಣ್ಣು ಕುಸಿಯುತ್ತಲೇ ಇತ್ತು. ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಭಯದಲ್ಲಿ ವಾಹನ ಸವಾರರು ಸಂಚರಿಸುತ್ತಿದ್ದರು.
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಮತ್ತೆ ಸಂಚಾರ ನಿಷೇಧಗೊಂಡಿದೆ.ಶಿರಾಡಿ ಘಾಟ್‌ನಲ್ಲಿ ಈ ವರ್ಷ ಐದನೇ ಬಾರಿಗೆ ಗುಡ್ಡ ಕುಸಿತ ಉಂಟಾಗಿದ್ದರಿಂದ ಗುತ್ತಿಗೆದಾರನ ಮಹಾಲೋಪದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ನಿನ್ನೆ ಕೂಡ ಈ ಇಂದು ಮಾರ್ಗದಲ್ಲಿ ಭಾರಿ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಮಣ್ಣಿನಡಿ ಒಂದು ಲಾರಿ ಸೇರಿದಂತೆ 6 ವಾಹನಗಳು ಸಿಲುಕಿದ್ದವು ಈ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ವಾಹನಗಳನ್ನುತೆಗೆಯಲಾಗಿತ್ತು. ಇದೀಗ ಇಂದು ಮತ್ತೆ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.