ಕೇರಳದ ವಯನಾಡಿನ ಭೂ ಕುಸಿತ ಪ್ರಕರಣವನ್ನು ರಾಷ್ಟ್ರೀಯ ವಿಪತ್ತು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೇ, 1,592 ಜನರನ್ನು ರಕ್ಷಣೆ ಮಾಡಲಾಗಿದೆ.
ದೇವರ ನಾಡಲ್ಲಿ ಭೀಕರ ಭೂಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತದಲ್ಲಿ ಈವರೆಗೆ 292 ಜನರು ಸಾವನ್ನಪ್ಪಿದ್ದಾರೆ. 192 ಮಂದಿ ನಾಪತ್ತೆಯಾಗಿದ್ದು, ಭೂಕುಸಿತದಲ್ಲಿ ಸಿಲುಕಿದ್ದಂತ 1,592 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
8 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇದ್ರ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ.
ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುಡ್ಡ ಕುಸಿತದಲ್ಲಿ ಸಂತ್ರಸ್ತರಾದಂತವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತ ವ್ಯವಸ್ಥೆಯನ್ನು ಕೇರಳ ಸರ್ಕಾರ, ಹೊರ ರಾಜ್ಯಗಳು ಮಾಡುತ್ತಿದ್ದಾವೆ