ಒಂಟಿ ಮಹಿಳೆಗೆ ಮೆಣಸಿನ ಪುಡಿ ಎರಚಿ, ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣ- ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ವಾರದ ಹಿಂದಷ್ಟೇ ನಡೆದ ಒಂಟಿ ಮಹಿಳೆಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ವಿಟ್ಲ ಸಮೀಪದ ಕರೋಪಾಡಿ ಗ್ರಾಮ ಪಂ.ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ಆರೋಪಿಗಳ ಸಹಿತ ನಾಲ್ವರನ್ನು ಕೊಡಗು ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ.

ಕರೋಪಾಡಿ ಜಲೀಲ್ ಹತ್ಯೆ ಪ್ರಕರಣದ ರೋಷನ್, ಪಿಲಿಂಗುರಿ ಸತೀಶ್ ಶೆಟ್ಟಿ, ಬಾಳೆ ಗಣೇಶ್ ಮತ್ತು ವೀರಕಂಭದ ಕುಸಮಾಕರನನ್ನು ಮಂಚಿ ಗ್ರಾಮದ ಕುಕ್ಕಾಜೆಯಿಂದ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ಆರೋಪಿಗಳು ವಿಟ್ಲದ ಮೊಬೈಲ್ ಅಂಗಡಿ ಮಾಲಿಕನಿಂದ ಸ್ವಿಫ್ಟ್ ಕಾರು ಬಾಡಿಗೆಗೆ ಪಡೆದು ದುಷ್ಕೃತ್ಯ ನಡೆಸಿದ್ದಾರೆಂಬ ಮಾಹಿತಿ ವಿಚಾರಣೆ ಸಂದರ್ಭ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ವಿಟ್ಲಕ್ಕೆ ಬಂದ ಪೊಲೀಸ್ ತಂಡ ಸ್ವಿಫ್ಟ್ ಕಾರನ್ನೂ ವಶಕ್ಕೆ ಪಡೆದಿದೆ.

ಜೈಲಿನಲ್ಲಿರುವ ಕುಖ್ಯಾತ ದರೋಡೆಕೋರ ಜಬ್ಬಾರ್ ಎಂಬಾತನ ಆದೇಶದ ಮೇರೆಗೆ ವಿಟ್ಲದ ನಟೋರಿಯಸ್ ಕ್ರಿಮಿನಲ್ ಗಳ ತಂಡ ದರೋಡೆ ನಡೆಸಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

Leave a Reply