December 17, 2025
WhatsApp Image 2024-08-07 at 2.55.29 PM

ಉಡುಪಿ: ನಗರದ ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರಿನಲ್ಲೇ ಜೋಡಿಯೊಂದು ಕಾಮದಾಟ ನಡೆಸಿ ಸಿಕ್ಕಿಬಿದ್ದಿದೆ. ಕಾರು ಪಾರ್ಕ್ ಮಾಡಿ ಹಾಡ ಹಗಲಿನಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬಳಿಕ ಪರಾರಿಯಾಗಿದೆ. ಕೆಂಬಣ್ಣದ ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿದ್ದು ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದ್ದಾರೆ. ಈ ವೇಳೆ ಜೋಡಿಯ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಬಳಿಕ ಮುಜುಗರದಿಂದ ಜೋಡಿ ಪರಾರಿಯಾಗಿದ್ದಾಗಿ ತಿಳಿದುಬಂದಿದೆ. ಕಾರನ್ನು ಕಳೆದ ಒಂದು ವಾರದಿಂದ ಈ ಜಾಗದಲ್ಲಿ ಅನುಮಾನಾಸ್ಪದವಾಗಿ ಪಾರ್ಕ್ ಮಾಡಲಾಗುತ್ತಿತ್ತು ಎಂದು ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಲೇ ಜೋಡಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ.

About The Author

Leave a Reply