November 8, 2025
WhatsApp Image 2024-08-09 at 2.52.52 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವಾಗಲೂ ಕಿಡಿ ಕಾರುತ್ತಿದ್ದ ನಟ ಚೇತನ್‌ ಅಹಿಂಸಾ,ಇದೀಗ ಮೋದಿಯವರ ಪರ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಜೊತೆಗೆ, ವಿನೇಶ್‌ ಫೋಗಟ್‌ ಪ್ರಕರಣದಲ್ಲಿ ಸಹನಟ ಪ್ರಕಾಶ್‌ ರೈ ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪ್ರಕಾಶ್​ ರಾಜ್​ ಕಾರ್ಟೂನ್​ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಕುಸ್ತಿಪಟು ವಿನೇಶ್​ ಫೋಗಟ್ ಅವರು ನಿಂತಿರುವ ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿದೆ. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂದು ಅರ್ಥ ಬರುವಂತೆ ಈ ಟ್ವೀಟ್ ಶೇರ್ ಮಾಡಿದ್ದರು. ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್​ ಕಿಡಿಕಾರಿದ್ದಾರೆ. ʼವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ. ಇಬ್ಬರು ನಟರ ಈ ಟ್ವೀಟ್ಟ್‌ಗಳು ಇದೀಗ ವೈರಲ್ ಆಗುತ್ತಿವೆ. ನೆಟ್ಟಿಗರು ಚೇತನ್ ಕಮೆಂಟ್​ಗೂ ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ.

About The Author

Leave a Reply