October 24, 2025
WhatsApp Image 2024-08-11 at 4.54.26 PM

ಬೆಂಗಳೂರು: ನಗರಕ್ಕೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬಂದಂತ ಮಾಂಸದ ಬಗ್ಗೆ ಭಾರೀ ವಿವಾದವೇ ಉಂಟಾಗಿತ್ತು. ನಾಯಿ ಮಾಂಸ ಎಂಬುದಾಗಿ ಅನೇಕರು ವಾದಿಸಿದ್ದರೇ, ಕುರಿ ಮಾಂಸ ಅಂತ ಕೆಲವರು. ರಾಜ್ಯ ಸರ್ಕಾರದ ಸರ್ಕಾರಿ ಲ್ಯಾಬ್ ರಿಪೋಸ್ಟ್ ಕೂಡ ಕುರಿ ಮಾಂಸ ಎಂಬುದಾಗಿ ಸ್ಪಷ್ಟ ಪಡಿಸಿತ್ತು.

ಈಗ ಹೈದರಾಬಾದ್ ಲ್ಯಾಬ್ ವರದಿ ಕೂಡ ಬಂದಿದೆ. ಹಾಗಾದ್ರೇ ನಾಯಿ ಅಥವಾ ಕುರಿ ಮಾಂಸನ ಎನ್ನುವ ಬಗ್ಗೆ ಮುಂದೆ ಓದಿ.

ಆಹಾರ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ಈಗಾಗಲೇ ಬೆಂಗಳೂರಿಗೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬಂದಂತ ಕುರಿ ಮಾಂಸ ಎಂಬುದಾಗಿ ಲ್ಯಾಬ್ ರಿಪೋಸ್ಟ್ ವರದಿಯಿಂದ ತಿಳಿದು ಬಂದಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದರು.

ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್ ರಜಾಕ್ ಅವರು ಕುರಿ ಮಾಂಸದಲ್ಲಿ ನಾಯಿ ಮಾಂಸ ಬೆರೆಸಿದ್ದಾರೆ ಎಂಬುದಾಗಿ ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು. ಹೀಗೆ ಬೆಂಗಳೂರಿಗೆ ಬಂದಿದ್ದಂತ ಮಾಂಸವನ್ನು ಆರೋಗ್ಯ ಇಲಾಖೆಯಿಂದ ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ನಾಯಿ ಮಾಂಸ ಅಲ್ಲ. ಕುರಿ ಮಾಂಸ ಅಂತ ಲ್ಯಾಬ್ ರಿಪೋರ್ಟ್ ನಲ್ಲಿ ದೃಢಪಟ್ಟಿತ್ತು.

ಈಗ ಹೈದರಾಬಾದ್ ಲ್ಯಾಬ್ ವರದಿ ಕೂಡ ಸರ್ಕಾರದ ಕೈ ಸೇರಿದೆ. ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಮಿಶ್ರಣ ಮಾಡಿದಂತ ಆರೋಪ ಸುಳ್ಳು. ಬ್ಯಾಕ್ಸ್ ನಲ್ಲಿದ್ದ ಮಾಂಸದ ಸ್ಯಾಂಪಲ್ ಪರೀಕ್ಷೆಯನ್ನು ಮಾಡಲಾಗಿದೆ. ಅದರಲ್ಲಿ ಇರೋದು ಕೇವಲ ಕುರಿ ಮಾಂಸವೇ ಹೊರತು ಬೇರೇನೂ ಇಲ್ಲ ಎಂಬುದಾಗಿ ದೃಢಪಡಿಸಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

About The Author

Leave a Reply