October 27, 2025
WhatsApp Image 2024-08-13 at 10.55.53 AM

ಪಾಟ್ನಾ: ಮಹಿಳೆಯೊಬ್ಬರು ತನ್ನ ಗಂಡನನ್ನು ಬಿಟ್ಟು ಸಂಬಂಧಿ ಮಹಿಳೆಯೊಂದಿಗೆ ವಿವಾಹವಾಗಿದ್ದಾರೆ. ಈ ಅಪರೂಪದ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಸುಮನ್ ಹಾಗೂ ಶೋಭಾ ಸಂಬಂಧಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಶೋಭಾ ಇನ್ನೊಬ್ಬರ ಜತೆ ವಿವಾಹವಾಗುವುದು ಸುಮಾನ್ ಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಸುಮನ್ ಗಂಡನ ಮನೆಬಿಟ್ಟು ಶೋಭಾಳ ಜತೆ ಓಡಿ ಹೋಗಿ ಮದುವೆ ಆಗಿದ್ದಾರೆ. ಇಬ್ಬರು ಬೆಳವ ಗ್ರಾಮದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು, ತಾಳಿ ಕಟ್ಟಿ ಸಪ್ತಪದಿ ತುಳಿದಿದ್ದಾರೆ.

ದಂಪತಿ ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು, ಅವರ ನಿರ್ಧಾರವು ಪರಸ್ಪರ ಮತ್ತು ಅವರು ಜೀವನದುದ್ದಕ್ಕೂ ಒಟ್ಟಿಗೆ ಇರಲು ಉದ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಸಾಮಾಜಿಕ ರೂಢಿಗಳ ಕೆಲವು ಸ್ವಯಂ-ನಿಯೋಜಿತ ರಕ್ಷಕರು ಮದುವೆಯನ್ನು ಖಂಡಿಸಿದ್ದಾರೆ, ಇದು ಕಾನೂನುಬಾಹಿರ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

About The Author

Leave a Reply