November 9, 2025
WhatsApp Image 2024-08-14 at 5.25.46 PM

ವಿಟ್ಲ: ಕೇಪು ವಲಯದ ಒಕ್ಕೂಟದ ಪದಾಧಿಕಾರಿಗಳ ತರಭೇತಿಯು ಕನ್ಯಾನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬುಧವಾರ (ಆ.14) ನಡೆಸಲಾಯಿತು.

ತರಭೇತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ಉದ್ಘಾಟಿಸಿ ಶುಭ ಹಾರೈಸಿದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು ಅಬ್ದುಲ್ ರಹಿಮಾನ್, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಕೇಪು ವಲಯಧ್ಯಕ್ಷರಾದ ಗಣೇಶ್ ಮೈರ ಉಪಸ್ಥಿತರಿದ್ದರು.

ನಂತರ ಜಿಲ್ಲಾ ನಿರ್ದೇಶಕರು ಯೋಜನೆಯ ಹಿನ್ನಲೆ, 1982 ರಿಂದ ಯೋಜನೆ ನಡೆದು ಬಂದ ಹಾದಿ, ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಯೋಜನಾಧಿಕಾರಿಗಳು ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ, ಯೋಜನೆಯ ಇತರ ಸೌಲಭ್ಯಗಳು, ಸಾಲ ಮಂಜೂರಾತಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಜಿಲ್ಲಾ ಪ್ರಬಂಧಕರಾದ ವಿಶ್ವನಾಥ್ ರವರು ಬಡ್ಡಿ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿದರು.
ವಲಯದ ಮೇಲ್ವಿಚಾರಕರ ಜಗದೀಶ್ ಕಾರ್ಯಕ್ರಮ ಸಂಘಟಿಸಿದರು.
ಕಾರ್ಯಕ್ರಮದಲ್ಲಿ ಅಡ್ಯನಡ್ಕ ಸೇವಾಪ್ರತಿನಿಧಿ ಗಾಯತ್ರಿ ಸ್ವಾಗತಿಸಿ, ಶಿರಂಕಲ್ಲು ಸೇವಾಪ್ರತಿನಿಧಿ ಭವಾನಿ ಕಾರ್ಯಕ್ರಮ ನಿರೂಪಣೆ ಮಾಡಿ, ಮಾಣಿಲ ಸೇವಾಪ್ರತಿನಿಧಿ ಧನ್ಯವಾದ ನೀಡಿದರು. ವಲಯದ ಸೇವಾಪ್ರತಿನಿಧಿಗಳು ಸಹಕರಿಸಿದರು.

About The Author

Leave a Reply