ಪುತ್ತೂರು: ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದ ಘಟನೆ ನಡೆದಿದ್ದು ಇದನ್ನು SKSSF ಕ್ಯಾಂಪಸ್ ವಿಂಗ್ ಪುತ್ತೂರು ವಲಯ ಸಮಿತಿಯು ತೀವ್ರವಾಗಿ ಖಂಡಿಸಿದೆ.ಆರೋಪಿ ವಿದ್ಯಾರ್ಥಿಯನ್ನು ಕೂಡಲೇ ಬಂಧಿಸುವಂತೆ ಸಮಿತಿಯು ಆಗ್ರಹಿಸಿದೆ.ಶಾಲಾ ಆವರಣದೊಳಗೆ ಹರಿತವಾದ ಆಯುಧ ತರುವುದು ಶಿಕ್ಷಾರ್ಹವಾಗಿದೆ.ಮಾತ್ರವಲ್ಲದೆ ವಿದ್ಯಾರ್ಥಿನಿಯ ಜೀವಕ್ಕೆ ಅಪಾಯವು ಉಂಟಾಗುವ ಸಾಧ್ಯತೆಯಿದ್ದ ಘಟನೆಯನ್ನು ಶಿಕ್ಷಕಿಯೋರ್ವರು ಮರೆಮಾಚಲು ಪ್ರಯತ್ನಿಸಿದ್ದು ಖಂಡನಾರ್ಹ. ಪೋಲೀಸ್ ಇಲಾಖೆಯು ಈ ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು.ಆರೋಪಿಯನ್ನು ರಕ್ಷಿಸಲು ಶ್ರಮಿಸಿದ ಶಿಕ್ಷಕಿಯನ್ನು ಈ ಕೂಡಲೇ ಶಿಕ್ಷಣ ಇಲಾಖೆಯು ಕೆಲಸದಿಂದ ಅಮಾನತು ಮಾಡಬೇಕೆಂದು ಕ್ಯಾಂಪಸ್ ವಿಂಗ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಮುಂದೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.