Visitors have accessed this post 304 times.

ಭರತ್ ಶೆಟ್ಟಿ ಅವರಿಗೆ ಅಡ್ಡೂರು ಗ್ರಾಮದಲ್ಲಿ 826 ಮತಗಳು ನೀಡಿದ್ದು ಪಾಕಿಸ್ತಾನಿಯರೇ?- ಇನಾಯತ್ ಅಲಿ

Visitors have accessed this post 304 times.

ಕರಡಿಗೆ ಗೊತ್ತಿರೋದು ನಾಲ್ಕೇ ಹಾಡು ಎಲ್ಲ ಜೇನುತುಪ್ಪದ ಬಗ್ಗೆ ಅ‌ನ್ನುವಂತೆ ಬಿಜೆಪಿಯವರಿಗೆ ಪಾಕಿಸ್ತಾನ ಜಪ‌ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಲ್ಲ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಭರತ್ ಶೆಟ್ಟಿ, ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇಲ್ಲಸಲ್ಲದ ಆರೋಪ ಹೊರಿಸಿ, ಜೆರೋಸಾ ಶಾಲೆಯ ಓರ್ವ ಶಿಕ್ಷಕಿಯನ್ನು ಬೀದಿಗೆ ತಂದ ಕ್ಷುದ್ರ ಮನಸ್ಥಿತಿಯ ವ್ಯಕ್ತಿಯಿಂದ ಇನ್ನೆಂತ ಜವಾಬ್ದಾರಿಯುತ ಹೇಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಜನರ ಭಾವನೆಗಳನ್ನೇ ಕೆರಳಿಸುತ್ತ ಅಭಿವೃದ್ಧಿಯ ಕೆಲಸ ಕಿಂಚಿತ್ತೂ ಮಾಡದ ಭರತ್ ಶೆಟ್ಟಿ ಬಗ್ಗೆ ಜನತೆ ಜಿಗುಪ್ಸೆ ಪಡುವಂತಾಗಿದೆ.

ಭರತ್ ಶೆಟ್ಟಿ ಅವರೇ, ನೀವು ಶಾಸಕರಾಗಲು ಅಯೋಗ್ಯರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ವಿಫಲರಾಗಿರುವ ಭರತ್ ಶೆಟ್ಟಿ ಅವರು ಸುಲಭದಲ್ಲಿ ಪ್ರಚಾರ ಪಡೆದುಕೊಳ್ಳಲು ಕೀಳು ಮಟ್ಟದ ಮನಸ್ಥಿತಿಯ ಮೊರೆ ಹೋಗಿರುವುದು ದುರಂತ.

ನಿತ್ಯ ನಿರಂತರವಾಗಿ ಕೋಮುಪ್ರಚೋದಕ ಭಾವನಾತ್ಮಕ ವಿಷಯಗಳನ್ನು ಮಾತನಾಡುವುದು, ನಿಂದಿಸಿ ಕೆಣಕಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದೇ ಭರತ್ ಶೆಟ್ಟಿಯವರ ಚಾಳಿಯಾಗಿದೆ. ಅವರ ಪಕ್ಷದೊಳಗಿನ ಭಿನ್ನಮತದ ಕೋಪವನ್ನು ಸಾರ್ವಜನಿಕವಾಗಿ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಒಂದು ಆರೋಗ್ಯ ಕೇಂದ್ರ ಮಾಡಲ‍ಾಗದ ಇವರೆಂತಹ ವೈದ್ಯರು, ಒಂದು ಮಾರುಕಟ್ಟೆ ಕಟ್ಟಡ ಮುಗಿಸಲಾಗದ ಇವರೆಂತಹ ಶಾಸಕರು ಎಂಬ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದೇ ಜನರ ಮನಸ್ಸನ್ನು ಪದೇ ಪದೇ ಬೇರೆ ಕಡೆ ಸೆಳೆಯಲು ಕೋಮುವಾದ ಕೆರಳಿಸುತ್ತಿರುವುದು ಖಂಡನೀಯ.

ಅಡ್ಡೂರು ಗ್ರಾಮದಲ್ಲಿ 826 ಮತಗಳು ಭರತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಹಾಗಾದ್ರೆ ಮಿಸ್ಟರ್ ಭರತ್ ಶೆಟ್ರೇ ನಿಮಗೆ ಮತ ಹಾಕಿ ಗೆಲ್ಲಿಸಿದವರು ಪಾಕಿಸ್ತಾನಿಯರೇ?

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮೊದಲು ನಿಮ್ಮ ಪರಮಾಪ್ತರು ನಡೆಸುವುದನ್ನು ನಿಲ್ಲಿಸಿ ನಿಮ್ಮ ಧಮ್ಮು, ತಾಕತ್ತು ನಿರೂಪಿಸಿ. ಕಳೆದ ಬಿಜೆಪಿ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ರಾಷ್ಟ್ರೀಯ ಹಸಿರು ಪೀಠ ದಂಡ ಹಾಕಿದ ಪ್ರಕರಣ ಮರೆತು ಹೋಯಿತೇ?

ಕ್ಷೇತ್ರದಲ್ಲಿ ಅಭಿವೃದ್ಧಿಯನ್ನೂ ಮಾಡದೆ ಹೊಸ ಕೈಗಾರಿಕೆಯನ್ನು ತರಲು, ಉದ್ಯೋಗ ಸೃಷ್ಟಿಸಲು ತಾಕತ್ತು ಇಲ್ಲದ ನಿಮಗೆ ಜನರೇ ಮುಂದಿನ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ.

ಭರತ್ ಶೆಟ್ಟಿ ಅವರೇ, ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆಯೇ ನೀವು ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿ ಕ್ಷೇತ್ರದ ಸಮಸ್ತ ಜನತೆಗೆ ಅಪಮಾನ ಮಾಡಿರುವಿರಿ, ನೀವು ಕ್ಷೇತ್ರದ ಜನತೆಯ ಕ್ಷಮೆ ಯಾಚಿಸಲೇಬೇಕು!

Leave a Reply

Your email address will not be published. Required fields are marked *