October 27, 2025
WhatsApp Image 2024-08-26 at 6.16.52 PM

ಪುತ್ತೂರು ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ವಿಚಾರವನ್ನು ವಿಷಯಾಂತರ ಮಾಡಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಕೋಮುಗಲಭೆಗೆ ಯತ್ನಿಸುವ ವಾಟ್ಸಾಪ್ ಸಂದೇಶವನ್ನು ಪ್ರಸರಿಸಿದ ಇಬ್ರಾಹಿಂ ಎಂಬವನ ವಿರುದ್ಧ ವಿಟ್ಲ ಠಾಣಾಧಿಕಾರಿಯವರಿಗೆ ನವೀನ್‌ ಎಂಬವರು ಸಾರ್ವಜನಿಕರ ಪರವಾಗಿ ದೂರು ನೀಡಿದ್ದಾರೆ. ಪುತ್ತೂರು ಕಾಲೇಜು ಹುಡುಗಿಗೆ ಚೂರಿ ಇರಿದ ಪ್ರಕರಣ ಸುಕಾಂತ್ಯ ಕಂಡ ಕೂಡಲೇ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿರುವ ’ಇಬ್ರಾಹಿಂ ಸೂರ್ಯ’ ಎಂಬ ವ್ಯಕ್ತಿ ವಾಟ್ಸಾಪ್ ಸಂದೇಶವನ್ನು ಕಳಿಸುತ್ತಾ ಮಿತ್ತೂರು ಆರ್‌‌ಎಸ್‌‌ಎಸ್‌‌‌ ಉಗ್ರರ ಕೇಂದ್ರವಾಗುತ್ತಿದೆಯೇ? ಎಂದು ಬರೆದು ಪುತ್ತೂರು ಶಾಲಾ ವಿದ್ಯಾರ್ಥಿನಿಗೆ ಚೂರಿ ಇರಿದ ಮಿತ್ತೂರಿನ ಏಮಾಜೆ ನಿವಾಸಿ ಎಂದು ಅಮಾಯಕ ಅಪ್ರಾಪ್ತ ಹಿಂದೂ ಹುಡುಗನ ಭಾವಚಿತ್ರವನ್ನು ಕಳಿಸಿ ದ್ವೇಷ ಮೂಡುವಂತೆ ಮಾಡಿ ಧರ್ಮ ಧರ್ಮದ ಬಗ್ಗೆ ಅವಮಾನ ಹಾಗೂ ಧಾರ್ಮಿಕ ನಂಬಿಕೆ ಬಗ್ಗೆ ಅಸಡ್ಡೆ ತೋರುವಂತೆ ಮಾಡಿರುವ ಇಬ್ರಾಹಿಂ ಸೂರ್ಯ ಮತ್ತು ಸಂದೇಶವನ್ನು ಬರೆದು ಕೊಟ್ಟ ಗುಂಪು ನಿರ್ವಾಹಕನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಿಟ್ಲ ಠಾಣಾಧಿಕಾರಿಯವರಿಗೆ ನವೀನ್‌ ಎಂಬವರು ಮನವಿ ಸಲ್ಲಿಸಿದ್ದಾರೆ.

About The Author

Leave a Reply