ಉಡುಪಿ : ಆನ್ ಲೈನ್ ಟ್ರೇಡಿಂಗ್ ಮೋಸ: ಇಬ್ಬರ ಬಂಧನ , 13,95,000 ರೂ. ನಗದು ವಶ

ಉಡುಪಿ: ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನ್ ಲೈನ್ ಟ್ರೇಡಿಂಗ್ ಮೂಲಕ ವಂಚಿಸುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ 13,95,000 ರೂ. ನಗದು ವಶಪಡಿಸಿಕೊಂಡಿದೆ. ಆರೋಪಿಗಳು ವಾಟ್ಸಾಪ್ ಕರೆಮಾಡಿ ವ್ಯಕ್ತಿಗೆ ಕಸ್ಟಮ್ಸ್‌ನಿಂದ ಕರೆಮಾಡುತ್ತಿರುವುದಾಗಿ ತಿಳಿಸಿದ್ದರು. ನಿಮಗೆ ಕೋರಿಯರ್‌ನಲ್ಲಿ 5 ಪಾಸ್‌ಪೋರ್ಟ್‌, 5 ಎ.ಟಿ.ಎಮ್‌ ಕಾರ್ಡ್‌, 200 ಗ್ರಾಂ ಎಂ.ಡಿ.ಎಮ್.ಎ ಹಾಗೂ 5000 USD ಇದ್ದು ಈ ಕೋರಿಯರ್‌ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದ್ದಾರೆ. ದೂರುದಾರರು ಕೋರಿಯರ್‌ ಮಾಡಿಲ್ಲ ಎಂದು ತಿಳಿಸಿದಾಗ ಆರೋಪಿಗಳು ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೈನ್‌ ಮೂಲಕ ಸಂಪರ್ಕ ಕಲ್ಪಿಸಿಕೊಟ್ಟು, ಹಾಟ್‌ಲೈನ್‌ನಲ್ಲಿ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಕರೆ ಮಾಡಿ ವಂಚಿಸಿದ್ದರು. ಬಳಿಕ ಬೆದರಿಸಿ ಹಂತ ಹಂತವಾಗಿ ಒಟ್ಟು 1,33,81,000 ರೂ.ಹಣವನ್ನು ವರ್ಗಾಯಿಸಿದ್ದರು. ಈ ಬಗ್ಗೆ ಅರುಣ್‌ ಕುಮಾರ್‌ ಗೋವಿಂದ ಕರ್ನವರ್‌ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply