October 21, 2025
WhatsApp Image 2024-08-30 at 4.55.48 PM

ವಿವಾಹಿತ ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೋರ್ವ ಅಪಹರಿಸಿಕೊಂಡು ಹೋಗಿದ್ದು, ಇದನ್ನು ಲವ್ ಜಿಹಾದ್ ಎಂದು ಪರಿಗಣಿಸಿ ಕೂಡಲೇ ಆರೋಪಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಆ ಮಹಿಳೆಯ ಪೋಷಕರೊಂದಿಗೆ ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗದ ಮುನ್ನಾ ಎಂಬ ಮುಸ್ಲಿಂ ವ್ಯಕ್ತಿ ಧಾರವಾಡದ ಆಂಜನೇಯನಗರದ ತಂಗೆಮ್ಮ ಎಂಬ ಮಹಿಳೆ ಇದ್ದ ಮನೆಯ ಎದುರಿಗೆ ಬಾಡಿಗೆ ಮನೆ ಪಡೆದು ಕಳೆದ ಆರು ತಿಂಗಳಿನಿಂದ ಅಲ್ಲೇ ವಾಸವಿದ್ದ. ಈ ವೇಳೆ ತಂಗೆಮ್ಮಳ ಪರಿಚಯ ಮಾಡಿಕೊಂಡ ಈತ ಆಕೆಯ ಜೊತೆ ಪ್ರೀತಿ, ಪ್ರೇಮದ ಕಥೆ ಕಟ್ಟಿ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ವಿಚಿತ್ರ ಎಂದರೆ ಮುನ್ನಾ ಎಂಬಾತನಿಗೆ ಮದುವೆ ಆಗಿ ಎರಡು ಮಕ್ಕಳು ಸಹ ಇವೆ. ತಂಗೆಮ್ಮಳಿಗೂ ಮದುವೆಯಾಗಿದ್ದು, ಆಕೆಯನ್ನು ಇನ್ನೂ ಗಂಡನ ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಜುಲೈ 11 ರಂದೇ ಈ ಸಂಬಂಧ ಉಪನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದ್ದರೂ ಇದುವರೆಗೂ ಆ ಇಬ್ಬರೂ ಪತ್ತೆಯಾಗಿಲ್ಲ. ಮುನ್ನಾ ತಂಗೆಮ್ಮಳ ತಾಯಿಯ ಹತ್ತಿರ ದುಡ್ಡು ಸಹ ಪಡೆದುಕೊಂಡು ಹೋಗಿದ್ದಾನಂತೆ. ದೂರು ದಾಖಲಾಗಿ ಒಂದೂವರೆ ತಿಂಗಳಾದರೂ ತಂಗೆಮ್ಮಳನ್ನು ಪೊಲೀಸರು ಪತ್ತೆ ಮಾಡದ ಹಿನ್ನೆಲೆಯಲ್ಲಿ ತಂಗೆಮ್ಮಳ ಪೋಷಕರು ಶ್ರೀರಾಮ ಸೇನೆಯ ಸಹಾಯ ಪಡೆದು ಇದೀಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಮುನ್ನಾ ಎಂಬಾತನ ಮೇಲೆ ಅಪಹರಣದ ಕೇಸ್ ದಾಖಲಿಸದೇ ಕೇವಲ ಮಿಸ್ಸಿಂಗ್ ಕೇಸ್ ದಾಖಲಿಸಲಾಗಿದೆ. ಅಲ್ಲದೇ ಇದೊಂದು ಲವ್ ಜಿಹಾದ್ ಎಂದು ಪರಿಗಣಿಸಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಇದೇ ರೀತಿ 44 ಸಾವಿರ ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. ಪೊಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ವಾರದ ಅವಧಿಯಲ್ಲಿ ಮುನ್ನಾ ಎಂಬಾತನನ್ನು ಪತ್ತೆ ಮಾಡಿ ಆತನ ಮೇಲೆ ಲವ್ ಜಿಹಾದ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

About The Author

Leave a Reply