
ಮೂರು ದಿನಗಳ ಹಿಂದೆ ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆಯಾಗಿದ್ದಾರೆ.



ಈ ಘಟನೆ ಗದಗದಲ್ಲಿ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಾಗಿ ಎರಡು ದಿನಗಳ ಬಳಿಕ ಮಹಿಳೆಯ ಧ್ವನಿ ಕೇಳಿ ಸ್ಥಳೀಯರು ಬಾವಿಯ ಬಳಿ ಬಂದಾಗ ಮಹಿಳೆ ಬಾವಿಯಲ್ಲಿರುವುದು ಪತ್ತೆಯಾಗಿದೆ.
ಕೂಡಲೇ ಆಕೆಗೆ ಆಹಾರ ನೀಡಿ ಆಕೆಯನ್ನು ರಕ್ಷಿಸಿದ ಸ್ಥಳೀಯರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಬಾವಿಗೆ ಬಿದ್ದು, ಮೂರು ದಿನಗಳ ಕಾಲ ಬದುಕಿದ್ದೇ ಪವಾಡ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಆಗಸ್ಟ್ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಪರಿಚಿತ ಹೆಂಗಸೊಬ್ಬಳು ಏಕಾಏಕಿ ಮನೆಗೆ ನುಗ್ಗಿ ಈ ಮಹಿಳೆ ಕುತ್ತಿಗೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದಳಂತೆ. ಆನಂತರ ನನಗೆ ನೀನೇ ಬೇಕು ಎಂದ ಅಪರಿಚಿತ ಮಹಿಳೆ ಹೇಳಿದಳಂತೆ ನಾ ಮನೆ ಬಿಟ್ಟು ಬರೋದಿಲ್ಲ ಎಂದ ಸಂತ್ರಸ್ತ ಮಹಿಳೆ ನಿನಗೆ ಚಿನ್ನ ಬೆಳ್ಳಿ ಬೇಕಿದ್ದರೆ ಕೊಡುತ್ತೇನೆ ಎಂದಿದ್ದಾಳೆ. ಆದರೆ ಇದಾವುದೂ ಬೇಡ ನನಗೆ ನೀನೇ ಬೇಕು.. ಮನೆ ಬಿಟ್ಟು ಬಾ ಎಂದು ಎಳೆದಾಡಿದಳಂತೆ. ಆನಂತರ ಸಂತ್ರಸ್ತ ಮಹಿಳೆಯನ್ನು ಜೋಳದ ಹೊಲದ ಮೂಲಕ ಎಳೆದುಕೊಂಡು ಹೋಗಿದ್ದಾಳೆ. ಅಷ್ಟೇ ಅಲ್ಲದೇ ಸಂತ್ರಸ್ತ ಮಹಿಳೆಯ ಬಳಿ ನಿನ್ನ ತಾಳಿ ಕೊಡು ಇಲ್ಲದಿದ್ದರೆ ಬಾವಿಗೆ ಹಾಕುತ್ತೇನೆ ಎಂದು ಅಪರಿಚಿತ ಮಹಿಳೆ ಬೆದರಿಸಿದ್ದಾಳೆ. ಬಳಿಕ ಆಕೆಯನ್ನು ಆ ಬಾವಿಗೆ ಹಾಕಿ ಕಣ್ಮರೆಯಾಗಿದ್ದಾಳೆ ಎನ್ನುತ್ತಿದ್ದಾಳೆ ಸಂತ್ರಸ್ತ ಮಹಿಳೆ ಮಹಿಳೆ ಬಾವಿಗೆ ಬಿದ್ದ ತಕ್ಷಣ ಪ್ರಜ್ಞೆ ತಪ್ಪಿದ್ದು, ಮರುದಿನ ಎಚ್ಚರವಾದ ಬಳಿಕ ತಾನು ಬಾವಿಯಲ್ಲಿ ಬಿದ್ದಿರುವುದರ ಅರಿವಾಗಿ ರಕ್ಷಣೆ ಕೋರಿ ಕೂಗಿದ್ದಾಳೆ. ಆದರೆ ನಿರ್ಜನ ಪ್ರದೇಶವಾದ್ದರಿಂದ ಈ ಮಹಿಳೆಯ ಕೂಗು ಯಾರಿಗೂ ಕೇಳದೆ ಆಕೆ ಮೂರು ದಿನ ಬಾವಿಯಲ್ಲಿ ಇರಬೇಕಾಯಿತು.